ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಮುಲ್ಕಿಸುಂದರ ರಾಮ ಪ್ರಶಸ್ತಿ ಪ್ರದಾನ; ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಮುಲ್ಕಿ:ಇಂದಿನ ಮಕ್ಕಳಿಗೆ ಸಂಸ್ಕಾರ ಸಂಸ್ಕೃತಿ ತಿಳಿಸುವ ಕಾರ್ಯ ಆಗಬೇಕು ಇಂದು ಹೆಬ್ರಿ ಬಂಟರ ಸಂಘದ ಅಧ್ಯಕ್ಷ ಮುನಿಯಾಲು ಉದಯಕುಮಾರ್ ಶೆಟ್ಟಿ ಹೇಳಿದರು. ಅವರು ಮುಲ್ಕಿ ಬಂಟರ ಸಂಘದ ವತಿಯಿಂದ ವಿದ್ಯಾರ್ಥಿ ಸಹಾಯಧನ. ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ದೀಪ ಬೆಳಗಿಸಿ ಮಾತನಾಡಿದರು.

ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ ಸಂಘ ಸಂಸ್ಥೆಗಳು ಸಮಾಜ ಮುಖಿ ಕೆಲಸದ ಮೂಲಕ ಬಡವರ ಕಣ್ಣೀರೊರೆಸುವ ಕೆಲಸ ಆಗಬೇಕು. ಮುಲ್ಕಿ ಬಂಟರ ಸಂಘದ ವತಿಯಿಂದ ಅನೇಕ ಸಹಾಯ ಹಸ್ತ ಕಾರ್ಯಕ್ರಮಗಳು ನಡೆಯುತ್ತಿದ್ದು ಶ್ಲಾಘನೀಯ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ ಹೆಗ್ಡೆ ವಹಿಸಿದ್ದರು

ಕಾರ್ಯಕ್ರಮದಲ್ಲಿ ಕಳೆದ ಆರೂವರೆ ದಶಕಗಳಿಂದ ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸಿದ ಅರುವ ಕೊರಗಪ್ಪ ಶೆಟ್ಟರಿಗೆ ಮುಲ್ಕಿ ಸುಂದರ ರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕೃಷಿ ಸಾಧಕರಾದ ಶಿಮಂತೂರು ಜಯರಾಮ ಶೆಟ್ಟಿ. ಪಂಜಿನಡ್ಕ ಹರೀಶ್ ಶೆಟ್ಟಿ, ಸಹಕಾರಿ ಕ್ಷೇತ್ರದ ಸಾಧಕ ಮುಲ್ಕಿ ವಿಜಯ ರೈತ ಸೊಸೈಟಿ ಅಧ್ಯಕ್ಷ ರಂಗನಾಥ ಶೆಟ್ಟಿ, ಕ್ರೀಡಾ ಸಾಧಕ ಅಭಿಷೇಕ್ ಶೆಟ್ಟಿ, ಮೋಕ್ಷ ಎಸ್. ಶೆಟ್ಟಿ ಮಾನಂಪಾಡಿ, ಶಿಕ್ಷಣ ಸಾಧಕ ಕಿರಣ್ ಶೆಟ್ಟಿ ಪಂಜ ರವರನ್ನು ಗೌರವಿಸಲಾಯಿತು.ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪುರಸ್ಕಾರ ನೀಡಲಾಯಿತು.

ನೂತನವಾಗಿ ಆಯ್ಕೆಯಾದ ಪಂಚಾಯತ್ ಅಧ್ಯಕ್ಷರು ಸದಸ್ಯರು ಸಹಕಾರಿ ಸಂಘಗಳ ಅಧ್ಯಕ್ಷರನ್ನು ಗೌರವಿಸಲಾಯಿತು.

ಸುಂದರ ರಾಮ ಶೆಟ್ಟಿ ಟ್ರಸ್ಟಿನ ಮನೋಹರ ಶೆಟ್ಟಿ, ಬಂಟರ ಸಂಘದ ಕಾರ್ಯದರ್ಶಿ ಕೆ ರವಿರಾಜ ಶೆಟ್ಟಿ, ಉಪಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ಕೋಶಾಧಿಕಾರಿ ಅಶೋಕ್ ಕುಮಾರ ಶೆಟ್ಟಿ. ಯುವ ವಿಭಾಗದ ರಾಜೇಶ್ ಕುಮಾರ್ ಶೆಟ್ಟಿ, ಮಹಿಳಾ ವಿಭಾಗದ ಗೀತಾ ಜೆ. ಹೆಗ್ಡೆ. ಪ್ರಚಾರ ವಿಭಾಗದ ನಿಶಾಂತ ಶೆಟ್ಟಿ ಕಿಲೆಂಜೂರು, ಸಾಯಿನಾಥ ಶೆಟ್ಟಿ, ಶರತ್ ಶೆಟ್ಟಿ, ಶ್ರೀಶ ಐಕಳ ಮತ್ತಿತರರಿದ್ದರು.

ಕಾರ್ಯಕ್ರಮದ ಮೊದಲು ಬಂಟರ ಸಂಘದ ಆವರಣ ಗೋಡೆಯನ್ನು ಉದ್ಯಮಿ ಕಿನ್ನಿಗೋಳಿ ಸೀತಾರಾಮ ಶೆಟ್ಟಿ ಉದ್ಘಾಟಿಸಿದರು.

Edited By : Nagesh Gaonkar
Kshetra Samachara

Kshetra Samachara

19/12/2021 03:08 pm

Cinque Terre

7.87 K

Cinque Terre

0

ಸಂಬಂಧಿತ ಸುದ್ದಿ