ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಡಿ. 18 ರಂದು ಶ್ರೀಕೃಷ್ಣಮಠಕ್ಕೆ ಕಾಶೀ ಮಠಾಧೀಶರು

ಉಡುಪಿ: ಶ್ರೀ ಕೃಷ್ಣಮಠಕ್ಕೆ ಶ್ರೀಕಾಶೀ ಮಠ ಸಂಸ್ಥಾನದ ಪೀಠಾಧಿಪತಿ ಶ್ರೀಸಂಯಮೀಂದ್ರತೀರ್ಥ ಶ್ರೀಪಾದರು ಡಿ. 18ರಂದು ಶನಿವಾರ ಭೇಟಿ ನೀಡಿ ದೇವರ ದರ್ಶನ ಪಡೆಯಲಿದ್ದಾರೆ.

ಶ್ರೀಸಂಯಮೀಂದ್ರ ತೀರ್ಥ ಶ್ರೀಪಾದರು ಇದೇ ಮೊದಲ ಬಾರಿಗೆ ಶ್ರೀ ಕೃಷ್ಣಮಠಕ್ಕೆ ಆಗಮಿಸುತ್ತಿದ್ದು ಸಂಸ್ಕೃತ ಕಾಲೇಜಿನ ವೃತ್ತದ ಬಳಿ ಅಪರಾಹ್ನ 3.30ಕ್ಕೆ ಅವರನ್ನು ಸ್ವಾಗತಿಸಲಾಗುವುದು.

ಪರ್ಯಾಯ ಶ್ರೀಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ದೇವರ ದರ್ಶನ ಮಾಡಿಸಿ ಗೌರವಿಸಿದ ಬಳಿಕ ಸಂಜೆ 4 ಗಂಟೆಗೆ ರಾಜಾಂಗಣದಲ್ಲಿ ನಡೆಯುವ ಅದಮಾರು ಪರ್ಯಾಯದ ಮಂಗಲೋತ್ಸವ ‘ವಿಶ್ವಾರ್ಪಣಮ್’ ಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ಪಾಲ್ಗೊಂಡು ಸಂದೇಶ ನೀಡಲಿದ್ದಾರೆ.

Edited By : PublicNext Desk
Kshetra Samachara

Kshetra Samachara

15/12/2021 04:32 pm

Cinque Terre

3.85 K

Cinque Terre

0