ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: "ವೀರ ಯೋಧರ ಬಲಿದಾನ ಸ್ಮರಣೆ ನಮ್ಮ ಆದ್ಯ ಕರ್ತವ್ಯ": ಸುನಿಲ್ ಆಳ್ವ

ಮುಲ್ಕಿ: ಮುಲ್ಕಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಹೆಲಿಕಾಪ್ಟರ್ ದುರಂತದಲ್ಲಿ ಮೃತರಾದ ಸೇನಾ ಪಡೆಗಳ ಮುಖ್ಯಸ್ಥರಾದ ಬಿಪಿನ್ ರಾವತ್ ಹಾಗೂ ಸೈನಿಕರಿಗೆ ಭಾವಪೂರ್ಣ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಗುರುವಾರ ಸಂಜೆ ಮುಲ್ಕಿ ಬಸ್ ನಿಲ್ದಾಣ ಬಳಿ ನಡೆಯಿತು.

ಈ ಸಂದರ್ಭ ಮುಲ್ಕಿ ಬಿಜೆಪಿ ಮಂಡಲಾಧ್ಯಕ್ಷ ಸುನಿಲ್ ಆಳ್ವ ಮಾತನಾಡಿ ವೀರ ಯೋಧರ ಬಲಿದಾನಗಳನ್ನು ಸ್ಮರಣೆ ಮಾಡುವ ಮುಖಾಂತರ ಮತ್ತಷ್ಟು ಯೋಧರು ಭಾರತೀಯ ಸೇನಾಪಡೆಗೆ ಸೇರಿಸಲು ಪ್ರೋತ್ಸಾಹ ನೀಡೋಣ. ನಮ್ಮ ಸೈನಿಕರು ದೇಶದ ಆಸ್ತಿಯಾಗಿದ್ದು ದೇಶಕ್ಕಾಗಿ ಬಲಿದಾನ ಗೈದ ಸೈನಿಕರ ಜೊತೆ ನಾವಿದ್ದೇವೆ ಎಂಬ ಭಾವನೆಯನ್ನು ಎಲ್ಲರೂ ವ್ಯಕ್ತಪಡಿಸುವ ಮುಖಾಂತರ ಭಾರತೀಯ ಸೇನೆಗೆ ಶತ್ರುಗಳನ್ನು ಎದುರಿಸಲು ಹುರಿದುಂಬಿ ಸೋಣ ಎಂದರು.

ಕಾರ್ಯಕ್ರಮದಲ್ಲಿ ಮೃತ ಯೋಧರಿಗೆ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಈ ಸಂದರ್ಭ ಭಾರತೀಯ ಜನತಾ ಪಾರ್ಟಿಯ ಮೂಲ್ಕಿ ವಲಯದ ಕಾರ್ಯಕರ್ತರು ನಗರ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

09/12/2021 08:59 pm

Cinque Terre

13.37 K

Cinque Terre

0

ಸಂಬಂಧಿತ ಸುದ್ದಿ