ಸುಬ್ರಹ್ಮಣ್ಯ: ಸುಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಚಂಪಾ ಷಷ್ಠಿ ಮಹೋತ್ಸವ ಸಂದರ್ಭ ಭಕ್ತಾದಿಗಳು ನಡೆಸುವ ಎಡೆಸ್ನಾನ ಸೇವೆಯನ್ನು ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರದ್ದು ಮಾಡಿ ನಿರ್ದೇಶನ ನೀಡಿದ್ದು, ಅದರಂತೆ ನಿರ್ಣಯ ಕೈಗೊಳ್ಳಲಾಗಿದೆ.
ಚಂಪಾ ಷಷ್ಠಿ ಮಹೋತ್ಸವದ ಚೌತಿ ಪಂಚಮಿ ಷಷ್ಠಿ ದಿನಗಳಂದು ದೇವಾಲಯದ ಹೊರಾಂಗಣದಲ್ಲಿ ಭಕ್ತಾದಿಗಳು ಸ್ವಯಂ ಆಗಿ ನಡೆಸುವ ಎಡೆ ಸ್ನಾನ ನಡೆಸಲು ಈ ಬಾರಿಯೂ ಅವಕಾಶ ನೀಡಲಾಗುವುದಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷವೂ ಎಡೆಸ್ನಾನ ರದ್ದು ಮಾಡಲಾಗಿತ್ತು.
Kshetra Samachara
05/12/2021 06:59 pm