ಕಟೀಲು : ಹಣ ಬೇಕಾಗಿರುವುದು ಮನುಷ್ಯನಿಗೆ ಮಾತ್ರ. ಬುದ್ದಿ ಇರುವಂತಹ ಕಾರಣಕ್ಕೆ ಒಳ್ಳೆಯ ಕಾರ್ಯಕ್ಕೆ ಬಳಸಬೇಕು. ನಿಂತ ನೀರಿನಂತೆ ವಾಸನೆ ಬರದೆ ಹರಿಯುವ ಮೂಲಕ ಸರ್ವರಿಗೂ ಉಪಕಾರಿಯಾಗಬೇಕು. ಸಜ್ಜನಿಕೆಯಿಂದ ಸತ್ಕಾರ್ಯಗಳಿಂದ ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳಬೇಕು ಎಂದು ವಿದ್ವಾಂಸ ತೋಕೂರು ಸುಬ್ರಹ್ಮಣ್ಯ ಭಟ್ ಹೇಳಿದರು.
ಅವರು ಕಟೀಲು ಶ್ರೀನಿಕೇತನ ಸಭಾಂಗಣದಲ್ಲಿ ನಂದಿನಿ ಬ್ರಾಹ್ಮಣ ಸಭಾದ ಮಹಾಸಭೆ ಹಾಗೂ ವಾರ್ಷಿಕೋತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿದರು. ಹರಿಕೃಷ್ಣ ಪುನರೂರು ಮಾತನಾಡಿ ಬ್ರಾಹ್ಮಣರು ಶಿವಳ್ಳಿ ಹವ್ಯಕ ಕೋಟ ಎಂದು ಜಗಳವಾಡದೆ, ಕಾನೂನಿನ ಒಳಗಡೆಯೇ ಕಷ್ಟದಲ್ಲಿರುವ ಬ್ರಾಹ್ಮಣರಿಗೆ ಸಹಾಯ ಮಾಡುವಂತಾಗಬೇಕು. ತನ್ನಿಂದ ಉಪಕಾರ ಪಡೆದು ಉಪಕಾರ ಸ್ಮರಣೆ ಇಲ್ಲದವರೂ ಇದ್ದಾರೆ. ನೂರು ಮನೆ ಕಟ್ಟಿಕೊಟ್ಟಿದ್ದರೂ ಆ ಮನೆಯಲ್ಲಿರುವ ಕೆಲವರಿಗೆ ನನ್ನ ಪರಿಚಯ ಇಲ್ಲ. ಹಾಗೆಂದು ಸೇವೆ ಮಾಡುವ ಸಂದರ್ಭ ನನ್ನ ಕರ್ತವ್ಯ ಎಂದು ಮಾಡಿದ್ದೇನೆಯೇ ಹೊರತು ಯಾವುದೇ ನಿರೀಕ್ಷೆ ಸ್ವಾರ್ಥದಿಂದ ಮಾಡಿಲ್ಲ ಎಂದರು.
ಸಾಧಕರ ನೆಲೆಯಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು,ಅನಂತಪ್ರಕಾಶದ ಕೊಡೆತ್ತೂರು ಸಚ್ಚಿದಾನಂದ ಉಡುಪ, ನಾರಾಯಣ ಶಾಸ್ತ್ರಿ, ನಿವೃತ್ತ ಶಿಕ್ಷಕ ಸತೀಶ ಭಟ್ ದಂಪತಿ ಸನ್ಮಾನಿಸಲಾಯಿತು.
ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ,ಸಭಾದ ಅಧ್ಯಕ್ಷ ಎಕ್ಕಾರು ಡಾ. ಪದ್ಮನಾಭ ಭಟ್. ಕಾರ್ಯದರ್ಶಿ ಅನಂತ ಆಚಾರ್ಯ, ಕೋರಿಯಾರ್ ಸುಬ್ರಹ್ಮಣ್ಯ ಭಟ್, ಜ್ಯೋತಿ ಉಡುಪ ಮತ್ತಿತರರಿದ್ದರು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶೈಕ್ಷಣಿಕ ಸಾಧಕರನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜಯಂತಿ. ಸುಮಂಗಲಾ ಭಟ್, ವಿಶ್ವೇಶ ರಾವ್, ನವನೀತ ಉಡುಪ ಸಂಮಾನ ಪತ್ರ ವಾಚಿಸಿದರು. ಗುರುಪ್ರಸಾದ ಭಟ್ ನಿರೂಪಿಸಿದರು. ಸುಧಾ ಉಡುಪ ವಂದಿಸಿದರು
Kshetra Samachara
05/12/2021 05:48 pm