ಮುಲ್ಕಿ: ಶಿಮಂತೂರು ಯುವಕ ಮಂಡಲ (ರಿ)ಮತ್ತು ಶ್ರೀ ಆದಿ ಜನಾರ್ದನ ಮಹಿಳಾ ಭಜನಾ ಮಂಡಳಿ ಸಹಯೋಗದಲ್ಲಿ ಕುಣಿತ ಭಜನಾ ತರಬೇತಿಯ ಉದ್ಘಾಟನಾ ಸಮಾರಂಭ ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದಲ್ಲಿ ಭಾನುವಾರ ನಡೆಯಿತು.
ಕಾರ್ಯಕ್ರಮವನ್ನು ದೇವಸ್ಥಾನದ ಅರ್ಚಕ ಪುರುಷೋತ್ತಮ ಭಟ್ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿ ಭಜನೆಯ ಮೂಲಕ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿದೆ. ಕುಣಿತದ ಭಜನಾ ಸಂಕೀರ್ತನೆಯ ಮೂಲಕ ಲೋಕಕ್ಕೆ ಬಂದಿರುವ ಸರ್ವ ದುರಿತಗಳು ನೆಮ್ಮದಿ ಶಾಂತಿ ಪ್ರಾಪ್ತಿಯಾಗುವುದು ಎಂದು ಆಶೀರ್ವಚನ ನೀಡಿದರು.
ಸಾಮಾಜಿಕ ಕಾರ್ಯಕರ್ತ ಶ್ರೀಪತಿ ಭಟ್ ಪರೆಂಕಿಲ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ದಿನೇಶ್ಚಂದ್ರ ಅಜಿಲ, ಹರೀಶ್ ಶೆಟ್ಟಿ , ಯುವಕ ಮಂಡಲದ ಅಧ್ಯಕ್ಷ ಕಿಶೋರ್ ಶೆಟ್ಟಿ,,ಮಹಿಳಾ ಭಜನಾ ಮಂಡಳಿಯ ಜ್ಯೋತಿ ಭಟ್, ರೂಪ ಭಟ್, ಭಜನಾ ತರಬೇತುದಾರರಾದ ಸುದರ್ಶನ್ ನಾಯಕ್, ಸುಮಂತ್, ಯುವಕ ಮಂಡಲದ ಹಾಗೂ ಮಹಿಳಾ ಮಂಡಲದ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ದೀಪಕ್ ಶಿಮಂತೂರು ಧನ್ಯವಾದ ಅರ್ಪಿಸಿದರು. ಯುವಕ ಮಂಡಲದ ಉಪಾಧ್ಯಕ್ಷ ಪ್ರವೀಣ್ ಶಿಮಂತೂರು ನಿರೂಪಿಸಿದರು.
Kshetra Samachara
05/12/2021 05:08 pm