ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ವೀರ ವಿಕ್ರಮ ಕಂಬಳದಲ್ಲಿ ʼಅಪ್ಪುʼ!; ದೊಡ್ಮನೆ ಹುಡ್ಗನ ಹೆಸರಲ್ಲಿ ಕೋಣ ಓಡಿಸಿದ ಅಭಿಮಾನಿ

ಬಂಟ್ವಾಳ: ʼಕರ್ನಾಟಕ ರತ್ನʼ ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ತಿಂಗಳೇ ಕಳೆದಿದೆ. ಆದ್ರೆ, ಅವರ ನೆನಪು ಮಾತ್ರ ಎಂದಿಗೂ ಶಾಶ್ವತ. ದೇಶ-ವಿದೇಶಗಳಲ್ಲಿ ಅಸಂಖ್ಯಾತ ʼಅಪ್ಪುʼ ಅಭಿಮಾನಿಗಳು ಇಂದೂ ತಮ್ಮ ನೆಚ್ಚಿನ ನಟನ ಅಗಲಿಕೆ ನೋವಿನಲ್ಲಿದ್ದಾರೆ. ಕೆಲವು ಕಡೆ ಅವರ ಅಭಿಮಾನಿಗಳು ʼಪುನೀತ್ʼ ಹೆಸರಲ್ಲಿ ಸಮಾಜಮುಖಿ ಕೈಂಕರ್ಯ ಮಾಡುತ್ತಾ ಬರುತ್ತಿದ್ದಾರೆ. ಅಂತವರಲ್ಲಿ ಈ ಕಡಲ ತಡಿ ಮಂಗಳೂರಿನ ಹೊಕ್ಕಾಡಿಗೋಳಿ ಕುಂಜಾಡಿ ಯಶೋಧರ ಮಹಾಬಲ ಪೂಜಾರಿ ಹಾಗೂ ಕಿರಣ್ ಮಂಜಿಲ ಎಂಬವರು ಸೇರಿದ್ದಾರೆ.

ಇವರಿಬ್ಬರು ತಮ್ಮ ಅಚ್ಚುಮೆಚ್ಚಿನ ʼಅಪ್ಪುʼ ಹೆಸರಲ್ಲಿ ಕಂಬಳಕರೆಯಲ್ಲಿ ಕೋಣಗಳನ್ನು ಓಡಿಸಿ ಅಭಿಮಾನ ಮೆರೆದರು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ಸಮೀಪ ಹೊಕ್ಕಾಡಿಗೋಳಿ ಎಂಬಲ್ಲಿ ʼವೀರ ವಿಕ್ರಮʼ ಜೋಡುಕರೆ ಕಂಬಳೋತ್ಸವ ನಡೆಯುತ್ತಿದೆ. ಈ ಬಯಲು ಕಂಬಳದಲ್ಲಿ ʼಬೆಂಗಳೂರು ದೊಡ್ಮನೆ ಪುನೀತ್ ರಾಜ್ ಕುಮಾರ್ʼ ಹೆಸರಲ್ಲಿ ಕೋಣಗಳನ್ನು ಓಡಿಸಿ, ನೆರೆದ ಕಂಬಳ ಹಾಗೂ ʼಯುವರತ್ನʼನ ಅಭಿಮಾನಿಗಳ ಪ್ರಶಂಸೆಗೆ ಪಾತ್ರರಾದರು.

Edited By : Nagesh Gaonkar
Kshetra Samachara

Kshetra Samachara

05/12/2021 04:41 pm

Cinque Terre

13.29 K

Cinque Terre

0

ಸಂಬಂಧಿತ ಸುದ್ದಿ