ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಗರಗುಡ್ಡೆ: ಸಂಘಟನೆಗಳಿಂದ ಅಭಿವೃದ್ಧಿ ನಿರಂತರವಾಗಲಿ; ಈಶ್ವರ ಕಟೀಲ್

ಮುಲ್ಕಿ: ಮತಾಂಧ ಶಕ್ತಿಗಳಿಗೆ ಬಲಿಯಾದ ಮುಲ್ಕಿಯ ಬಿಜೆಪಿ ನಾಯಕ ದಿ.ಸುಖಾನಂದ ಶೆಟ್ಟಿ ಸ್ಮರಣಾರ್ಥ ಅಭಿಮಾನಿಗಳ ವತಿಯಿಂದ ಮುಲ್ಕಿ ಸಮೀಪದ ಅಂಗರಗುಡ್ಡೆಯಲ್ಲಿ ನಿರ್ಮಾಣಗೊಂಡ ನೂತನ ಬಸ್‌ ತಂಗುದಾಣವನ್ನು ಉದ್ಯಮಿ ಶ್ರೀಕಾಂತ ಶೆಟ್ಟಿ ಕೆಂಚನಕೆರೆ ಲೋಕಾರ್ಪಣೆ ಮಾಡಿದರು.

ಬಳಿಕ ದಿ.ಸುಖಾನಂದ ಶೆಟ್ಟಿ, ಪ್ರೇಮ್ ಹಾಗೂ ದಿನೇಶ್ ಅವರಿಗೆ ಶೃದ್ಧಾಂಜಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ.ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಈಶ್ವರ ಕಟೀಲ್ ಮಾತನಾಡಿ, ಹಿಂದುತ್ವಕ್ಕಾಗಿ ತನ್ನ ಜೀವವನ್ನೇ ಬಲಿದಾನಗೈದ ದಿ.ಸುಖಾನಂದ ಶೆಟ್ಟಿ ಸಂಘಟನಾ ಚತುರನಾಗಿದ್ದು, ತಮ್ಮ ಆದರ್ಶ ಹಾಗೂ ಸಾಮಾಜಿಕ ಕಾರ್ಯಗಳ ಮೂಲಕ ಜನಮಾನಸದಲ್ಲಿ ಇನ್ನೂ ಉಳಿದಿದ್ದಾರೆ. ಅವರ ಆದರ್ಶಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಇಂದಿನ ಯುವ ಜನಾಂಗ ಮುಂದುವರಿಸುತ್ತಿರುವುದು ಶ್ಲಾಘನೀಯ ಎಂದರು.

ಮುಲ್ಕಿ ಮೂಡಬಿದರೆ ಬಿಜೆಪಿ ಮಂಡಲಾಧ್ಯಕ್ಷ ಸುನೀಲ್ ಅಳ್ವ, ಮುಲ್ಕಿ ನ.ಪಂ ಅಧ್ಯಕ್ಷ ಸುಭಾಸ್ ಶೆಟ್ಟಿ, ಕಿಲ್ಪಾಡಿ ಗ್ರಾ.ಪಂ ಉಪಾಧ್ಯಕ್ಷ ಗೋಪಿನಾಥ ಪಡಂಗ, ಉದ್ಯಮಿ ಸ್ವರಾಜ್ ಶೆಟ್ಟಿ, ಲ.ಸ್ಯಾನಿ ಪಿಂಟೋ, ಭಜರಂಗಧಳದ ಪ್ರೀತಮ್ ಶೆಟ್ಟಿ ಕಾಟಿಪಳ್ಳ, ಅತಿಕಾರಿಬೆಟ್ಟು ಗ್ರಾ.ಪಂ ಅಧ್ಯಕ್ಷ ಮನೋಹರ್ ಕೋಟ್ಯಾನ್, ಜಯಾನಂದ ಮುಲ್ಕಿ, ಕೃಷ್ಣ ಶೆಟ್ಟಿಗಾರ್ ಅಂಗಾರಗುಡ್ಡೆ, ಉದ್ಯಮಿ ರಮನಾಥ ಪೈ, ದಿ. ಸುಖಾನಂದ ಶೆಟ್ಟಿ ಅಭಿಮಾನಿ ಬಳಗದ ಜೀವನ್ ಶೆಟ್ಟಿ ಸುಧೀರ್ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕ್ಲಪ್ತ ಸಮಯದಲ್ಲಿ ತಂಗುದಾಣ ನಿರ್ಮಿಸಿ ಕೊಟ್ಟ ಗುತ್ತಿಗೆದಾರ ದಿವಾಕರ ಕರ್ಕೇರ ಹಾಗೂ ದಾನಿಗಳನ್ನು ಗೌರವಿಸಲಾಯಿತು. ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

01/12/2021 06:35 pm

Cinque Terre

3.26 K

Cinque Terre

0

ಸಂಬಂಧಿತ ಸುದ್ದಿ