ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಆರು ಯಕ್ಷಗಾನ ಮೇಳಗಳ ಆರಂಭೋತ್ಸವಕ್ಕೆ ಕ್ಷಣಗಣನೆ

ಬಜಪೆ:ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಯಕ್ಷಗಾನ ಮೇಳಗಳ ಆರಂಭೋತ್ಸವವು ಇಂದು ರಾತ್ರಿ ನಡೆಯಲಿದ್ದು,ಸಂಜೆ ದೇವಳದಲ್ಲಿ ಪ್ರಕ್ರಿಯೆಗಳು ಆರಂಭಗೊಂಡವು.ಗೆಜ್ಜೆ ಮುಹೂರ್ತಕ್ಕೆ ಮೊದಲು ದೇವಳದಲ್ಲಿ ಆರೂ ಮೇಳಗಳ ಪ್ರಧಾನ ಭಾಗವತರಿಂದ ಹಿಮ್ಮೇಳದೊಂದಿಗೆ(ಭಾಗವತಿಕೆ) ತಾಳಮದ್ದಳೆ ನಡೆಯುತ್ತದೆ.

ಆಸ್ರಣ್ಣರು ಕಲಾವಿದರಿಗೆ ಗೆಜ್ಜೆ ಹಸ್ತಾಂತರ ಮಾಡಿದ ಬಳಿಕ ಆರೂ ಯಕ್ಷಗಾನ ಮೇಳಗಳ ಹನ್ನೆರಡು ಕಲಾವಿದರು ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿ ಶ್ರೀ ದೇವರ ಎದುರು ಹಿಮ್ಮೇಳ ಸಹಿತ ಯಕ್ಷ ನಾಟ್ಯ ಸೇವೆ ನಡೆಸುವುದು ಸಂಪ್ರದಾಯ.ನಂತರ ದೇವಳದಲ್ಲಿ ಪ್ರದಕ್ಷಿಣೆ ಬಂದು ಗಣಪತಿ ದೇವರ ಎದುರು ನಾಟ್ಯ ಸೇವೆ ನಡೆದ ಬಳಿಕ ಕಟೀಲು ರಥ ಬೀದಿಯಲ್ಲಿನ ಚೌಕಿಗೆ ಚೆಂಡೆ ಮದ್ದಳೆ ವಾದ್ಯದೊಂದಿಗೆ ಭವ್ಯವಾದ ಮೆರವಣೆಗೆಯು ಹೊರಡಿ ಚೌಕಿ ಪೂಜೆ ನಡೆಯುತ್ತದೆ.

ಬಳಿಕ ಆರೂ ರಂಗಸ್ಥಳಗಳ ಲ್ಲಿ ಏಕಕಾಲದಲ್ಲಿ ದೇವರ ಪೂಜೆಯೊಂದಿಗೆ ಪೂರ್ವರಂಗದ ಪ್ರಸ್ತುತಿ ನಡೆಯುತ್ತದೆ.ನಂತರ ಪಾಂಡವಾಶ್ವಮೇಧ ಎಂಬ ಪ್ರಸಂಗದ ಸೇವೆ ಯಾಟವು ನಡೆಯುತ್ತದೆ.

Edited By : Nagesh Gaonkar
Kshetra Samachara

Kshetra Samachara

29/11/2021 09:19 pm

Cinque Terre

9.08 K

Cinque Terre

0

ಸಂಬಂಧಿತ ಸುದ್ದಿ