ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಬೌದ್ಧ ಧರ್ಮೀಯ ಪದ್ಧತಿಯಲ್ಲಿ 'ಮಾಯಾ ನಂದನ ' ಗೃಹ ಪ್ರವೇಶ

ಕುಂದಾಪುರ: ಬುದ್ಧನ ಶಾಂತಿ, ಅಂಬೇಡ್ಕರ್ ಅವರ ಅಧ್ಯಯನ ಮೂಲಕ ಇಡೀ ಜಗತ್ತು ಭಾರತವನ್ನು ಗುರುತಿಸುತ್ತದೆ. ಬುದ್ಧನ ಚಿಂತನೆ ಇಂದಿಗೂ ಪ್ರಸ್ತುತ. ಬುದ್ಧನನ್ನು ಮರೆತರೆ ಯುದ್ಧ ಖಚಿತ. ಅಂಬೇಡ್ಕರ್ ಚಿಂತನೆಯಂತೆ‌ ವಿದ್ಯೆ ಅತ್ಯಗತ್ಯ. ಜಗತ್ತೇ ಶಾಂತಿಯಿಲ್ಲದೆ ಕಂಗೆಡುತ್ತಿರುವ ಈ ಕಾಲಘಟ್ಟದಲ್ಲಿ ಬುದ್ಧನ ಶಾಂತಿ, ಕರುಣೆ, ಮೈತ್ರಿ‌‌ ನೆಲೆಸಲಿ ಎಂದು ಅಣದೂರು ಬುದ್ಧವಿಹಾರದ ವರಜ್ಯೋತಿ ಬಂತೇಜಿಯವರು ಅಭಿಪ್ರಾಯಪಟ್ಟರು.

ಕುಂದಾಪುರ ತಾಲೂಕಿನ ತಲ್ಲೂರು ಸಮೀಪದ ಗುಡ್ಡೆಯಂಗಡಿ ಬಳಿ ನಿರ್ಮಿಸಿದ ನೂತನ‌ ಗೃಹ 'ಮಾಯಾ ನಂದನ' ಗೃಹಪ್ರವೇಶ ಮನೆಯವರ ಇಚ್ಛೆಯಂತೆ ಬೌದ್ಧ ಧರ್ಮದ ಪ್ರಕಾರವಾಗಿ ನಡೆಯಿತು. ಈ‌ ಸಂದರ್ಭ ಬಂತೇಜಿಯವರು ಆಶೀರ್ವದಿಸಿದರು.

ಮೊದಲು ತ್ರಿಶರಣ ಪಂಚಶೀಲ ಬೋಧನೆ, ಬುದ್ಧ-ಧಮ್ಮ- ಸಂಘ ವಂದನೆ, ಕರಣೀಯ ಮೆತ್ತಸುತ್ತ-ಮೈತ್ರೀಯ ಘಾತಗಳು, ಪರಿತ್ರಾಣ ಪಾಠ ಹಾಗೂ ಜಯ ಮಂಗಳಾಘಾತ ನೆರವೇರಿಸಲಾಯಿತು.

'ಮಾಯಾ ನಂದನ' ನಿವಾಸ ಯಜಮಾನರಾದ ಮಂಜುನಾಥ-ಸಾಧು ದಂಪತಿ, ದಲಿತ ಸಂಘರ್ಷ ಸಮಿತಿ ಭೀಮ ಘರ್ಜನೆ ರಾಜ್ಯ ಸಂಚಾಲಕ ಉದಯ್ ಕುಮಾರ್ ತಲ್ಲೂರು, ರಾಜ್ಯ ಸಂಘಟನೆ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ, ತಲ್ಲೂರು ಗ್ರಾಪಂ ಅಧ್ಯಕ್ಷೆ ಭೀಮವ್ವ, ಸದಸ್ಯರಾದ ಚಂದ್ರ ದೇವಾಡಿಗ, ಸಂಜೀವ ದೇವಾಡಿಗ, ಕೃಷ್ಣ ಪೂಜಾರಿ, ಮಾಜಿ ಸದಸ್ಯ ವೆಂಕಟ, ಬೌದ್ಧ ಧರ್ಮಾಚಾರಿ ಶಂಭು ಸುವರ್ಣ ಉಡುಪಿ ಮತ್ತಿತರರು ಉಪಸ್ಥಿತರಿದ್ದರು. ವಸಂತ ವಂಡ್ಸೆ ಕಾರ್ಯಕ್ರಮ ನಿರ್ವಹಿಸಿದರು.

Edited By : Manjunath H D
Kshetra Samachara

Kshetra Samachara

29/11/2021 10:40 am

Cinque Terre

9.47 K

Cinque Terre

0

ಸಂಬಂಧಿತ ಸುದ್ದಿ