ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಭಾರತದ ಸಂವಿಧಾನ ಗೌರವಿಸುವ ಮುಖಾಂತರ ರಾಷ್ಟ್ರಕ್ಕೆ ಮಾದರಿಯಾಗಿ: ಡೇನಿಯಲ್ ದೇವರಾಜ್

ಮುಲ್ಕಿ: ಮುಲ್ಕಿಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಸಂವಿಧಾನ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವಕೀಲ ಹಾಗೂ ನೋಟರಿ ಡೇನಿಯಲ್ ದೇವರಾಜ್ ಭಾರತದ ಸಂವಿಧಾನ ಮತ್ತು ಕಾನೂನಿನ ಬಗ್ಗೆ ಮಾತನಾಡಿ ಭಾರತದ ಸಂವಿಧಾನದ ತತ್ವಗಳನ್ನು ಗೌರವಿಸುವ ಮುಖಾಂತರ ರಾಷ್ಟ್ರಕ್ಕೆ ಮಾದರಿಯಾಗಿ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ದಾನಿ ಎಂ.ಬಿ.ಖಾನ್, ಉಪನ್ಯಾಸಕಿ ಡಾ. ರೇಖಾ ಬಿ.ಎಸ್., ಎನ್ನೆಸ್ಸೆಸ್ ಅಧಿಕಾರಿ ರಮಾನಂದ, ಉಪನ್ಯಾಸಕ ವಸಂತ ಬಿಎಫ್, ಹಸಿರು ಪಡೆಯ ಮುಖ್ಯಸ್ಥ ಲಿಡಿಯ ಲೋನ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿ ಸಂಘದ ನಾಯಕನಾಗಿ ಮೌಲಾಲಿ, ಕಾರ್ಯದರ್ಶಿಯಾಗಿ ಪವಿತ್ರ, ಉಪನಾಯಕನಾಗಿ ಅಭಿಷೇಕ್, ಜೊತೆ ಕಾರ್ಯದರ್ಶಿಯಾಗಿ ಆದಿತ್ಯ ಮತ್ತು ವಿವಿಧ ಸಂಘದ ವಿದ್ಯಾರ್ಥಿಗಳು ಪ್ರಮಾಣವಚನ ಸ್ವೀಕರಿಸಿದರು.

ಸಂವಿಧಾನ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿನಿ ಮಹಾಲಕ್ಷ್ಮಿ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

26/11/2021 03:46 pm

Cinque Terre

3.97 K

Cinque Terre

0