ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ನ.28ರಂದು ತುಳು ಸಾಹಿತ್ಯ ಅಕಾಡೆಮಿಯಲ್ಲಿ ಯೋಗ ಚಿಕಿತ್ಸಾ ಕಾರ್ಯಾಗಾರ

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಆವಿಷ್ಕಾರ ಯೋಗ ಮಂಗಳೂರು ಸಹಯೋಗದಲ್ಲಿ ಹೃದಯ ಹಾಗೂ ಶ್ವಾಸಕೋಶ ಪುನಶ್ಚೇತನ ಯೋಗ ಚಿಕಿತ್ಸಾ ಕಾರ್ಯಾಗಾರ ನ.28ರಂದು ಬೆಳಗ್ಗೆ 7 ರಿಂದ ಮಧ್ಯಾಹ್ನ 2 ಗಂಟೆವರೆಗೆ ನಗರದ ತುಳು ಸಾಹಿತ್ಯ ಅಕಾಡೆಮಿಯಲ್ಲಿ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಈ ಕಾರ್ಯಾಗಾರದಲ್ಲಿ ತಜ್ಞ ಯೋಗ ಚಿಕಿತ್ಸಕ ಡಾ.ಕೆ.ಕೃಷ್ಣ ಭಟ್ ಅವರಿಗೆ ನುಡಿ ನಮನ ನಡೆಯಲಿದೆ.

ಅಂದು ಬೆಳಗ್ಗೆ 9 ಗಂಟೆಗೆ ಮಂಗಳೂರು ವಿ.ವಿ. ಕುಲಪತಿ ಡಾ.ಸುಬ್ರಹ್ಮಣ್ಯ ಯಡಪಡಿತ್ತಾಯ ಉದ್ಘಾಟಿಸಲಿದ್ದಾರೆ. ಮಂಗಳೂರು ವಿ.ವಿ. ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗ ಪ್ರೊಫೆಸರ್ ಮತ್ತು ಅಧ್ಯಕ್ಷ ಡಾ.ಕೆ.ಕೃಷ್ಣ ಶರ್ಮ ನುಡಿನಮನ ಸಲ್ಲಿಸಲಿದ್ದಾರೆ. ಅತಿಥಿಗಳಾಗಿ ಇಂಟೆಗ್ರೆಲ್ ಯೋಗ ಸತ್ಸಂಗ ಅಧ್ಯಕ್ಷ ಯೋಗಾಚಾರ್ಯ ವಿ.ಎಲ್. ರೇಗೊ ಭಾಗವಹಿಸಲಿದ್ದು, ಆಯಾಮ ಯೋಗ ಹಾಗೂ ಪ್ರಾಣವಿದ್ಯಾ ಕೇಂದ್ರ ನಿರ್ದೇಶಕ, ಯೋಗ ಚಿಕಿತ್ಸಕ ಶ್ರೀಕಾಂತ್ ಎಸ್.ವಿ. ಗುರುಸ್ಮರಣೆ ಮಾಡಲಿದ್ದಾರೆ ಎಂದರು.

ಆವಿಷ್ಕಾರ ಯೋಗ ಮಂಗಳೂರಿನ ಕುಶಾಲಪ್ಪ ಗೌಡ ಮಾತನಾಡಿ, ಯೆನೆಪೋಯ ಶ್ವಾಸಕೋಶ ಚಿಕಿತ್ಸಾ ವಿಭಾಗದಿಂದ ಶ್ವಾಸಕೋಶ ಸಂಬಂಧಿ ಸಿಒಪಿಡಿ, ಕಾಯಿಲೆ ಇರುವವರಿಗೆ ಉಚಿತ ಶ್ವಾಸಕೋಶ ತಪಾಸಣೆ ನಡೆಯಲಿದೆ. ಧೂಮಪಾನ ಮಾಡಿದವರು, ಹೊಗೆ- ಧೂಳಿನಲ್ಲಿ ಕೆಲಸ ಮಾಡಿದವರು ಉಸಿರಾಟ ಮತ್ತು ಆಯಾಸ ಸಮಸ್ಯೆ ಇರುವವರು ತಪಾಸಣೆಗೆ ಒಳಪಡಬಹುದು. ಸಿಒಪಿಡಿ ಸಮಸ್ಯೆ ಇದ್ದವರಿಗೆ ಒಂದು ತಿಂಗಳು ಉಚಿತ ಯೋಗ ತರಬೇತಿ ನೀಡಲಾಗುವುದು ಎಂದರು.

Edited By : Nagesh Gaonkar
Kshetra Samachara

Kshetra Samachara

25/11/2021 09:17 pm

Cinque Terre

20.68 K

Cinque Terre

2

ಸಂಬಂಧಿತ ಸುದ್ದಿ