ಮುಲ್ಕಿ: ಕಿನ್ನಿಗೋಳಿ ಸಮೀಪದ ದಾಮಸ್‌ಕಟ್ಟೆ ಕಿರೆಂ ಚರ್ಚ್‌ನಲ್ಲಿ ಬುಧವಾರ ನಡೆದ ವಾರ್ಷಿಕ ಹಬ್ಬದಲ್ಲಿ ಐಕಳಬಾವ, ತಾಳಿಪಾಡಿಗುತ್ತು, ಹಾಗೂ ಏಳಿಂಜೆ ಅಂಗಡಿಗುತ್ತುನವರಿಗೆ ಕಿರೆಂ ಚರ್ಚ್ ಪ್ರದಾನ ಧರ್ಮಗುರುಗಳಾದ ಓಸ್ವಾಲ್ಡ್ ಮಾಂತೆರೋ ರವರು ಅಡಿಕೆ , ವೀಳ್ಯ ಹಾಗೂ ಬಾಳೆಗೊನೆ ನೀಡುವ ಮೂಲಕ ಸೌಹಾರ್ದಕ್ಕೆ ವೇದಿಕೆಯಾಯಿತು.
ಹಿಂದೆ ಟಿಪ್ಪು ಸುಲ್ತಾನ್‌ನ ದಾಳಿಯ ಇತಿಹಾಸವುಳ್ಳ ಈ ಚರ್ಚ್‌ನ್ನು ಐಕಳಬಾವ, ತಾಳಿಪಾಡಿಗುತ್ತು, ಹಾಗೂ ಏಳಿಂಜೆ ಅಂಗಡಿಗುತ್ತುನವರು ರಕ್ಷಿಸಿದ್ದರು ಎಂಬ ಪ್ರತೀತಿಯಿದ್ದು ಆ ರಕ್ಷಣೆಯ ಸವಿನೆನಪಿಗಾಗಿ ಇಂದಿಗೂ ವಾರ್ಷಿಕ ಹಬ್ಬದಂದು ಗುತ್ತು ಮನೆತನದವರಿಗೆ ಬಾಳೆಗೊನೆ ನೀಡುವ ಮೂಲಕ ಗೌರವಿಸಲಾಗುತ್ತದೆ.
ಈ ಸಂದರ್ಭ ಪಣಿರ್ ಚರ್ಚ್ ಪ್ರಧಾನ ಧರ್ಮಗುರುಗಳಾದ ವಿಕ್ಟೆರ್ ಡಿಮೆಲೋ, ಸಹಾಯಕ ಧರ್ಮಗುರು ಸುನೀಲ್ ಡಿಸೋಜ, ಪಾದರ್ ಮ್ಯಾಕ್ಸಿಮ್ ನೊರೋಹ್ನ, ಎಸ್.ವಿ.ಡಿ ಮನೆಯ ಧರ್ಮಗುರುಗಳು, ಕಿನ್ನಿಗೋಳಿ ವಲಯ ಧರ್ಮಗುರುಗಳು, ಕಿರೆಂ ಚರ್ಚ್ ನ ಪಾಲನಾ ಮಂಡಳಿ ಉಪಾಧ್ಯಕ್ಷ ಸ್ಟೀವನ್ ಡಿ ಕುನ್ನ,ಕಾರ್ಯದರ್ಶಿ ಮ್ಯಾಕ್ಸಿಮ್ ಪಿಂಟೋ, ಸರ್ವ ಸಮಿತಿ ಚಾಲಕರಾದ ಸಂತಾನ್ ಡಿಸೋಜ ತಾಳಿಪಾಡಿ ಗುತ್ತು ದಿನೇಶ್ ಭಂಡ್ರಿಯಾಲ್, ಸುಕುಮಾರ್ ಶೆಟ್ಟಿ, ಏಳಿಂಜೆ ಅಂಗಡಿಗುತ್ತು ಗುತ್ತಿನಾರ್ ಬಾಲಕೃಷ್ಣ ಶೆಟ್ಟಿ, ಶಂಭು ಶೆಟ್ಟಿ, ಪ್ರಸಾದ್ ಶೆಟ್ಟಿ, ರಿಶಿತ್ ಶೆಟ್ಟಿ, ಐಕಳ ಬಾವ ಸುಕುಮಾರ್ ಭಂಡಾರಿ, ಜಯಪಾಲ ಶೆಟ್ಟಿ, ಬಾಸ್ಕರ್ ಶೆಟ್ಟಿ, ಉಪಸ್ಥಿತರಿದ್ದರು
Kshetra Samachara
24/11/2021 04:39 pm