ಮುಲ್ಕಿ: ಡಿಸೆಂಬರ್ 26 ರಂದು ನಡೆಯುವ ಮುಲ್ಕಿ ಸೀಮೆ ಅರಸು ಕಂಬಳ ಕ್ಕೆ ಭಾನುವಾರ ಸಂಜೆ ವಿಶೇಷ ಪ್ರಾರ್ಥನೆ ನಡೆಸಿ ಕುದಿ (ಮುಹೂರ್ತದ) ಮೂಲಕ ಕಂಬಳ ಗದ್ದೆಯಲ್ಲಿ ಪ್ರಾಯೋಗಿಕ ನೆಲೆಯಲ್ಲಿ ಕೋಣಗಳನ್ನು ಓಡಿಸಲಾಯಿತು.
ಈ ಸಂದರ್ಭ ಮುಲ್ಕಿ ಸೀಮೆ ಅರಸರಾದ ದುಗ್ಗಣ್ಣ ಸಾವಂತರು ಮಾತನಾಡಿ ಮುಲ್ಕಿ ಸೀಮೆ ಕಂಬಳ ನಮ್ಮ ಹೆಮ್ಮೆಯ ಪ್ರತೀಕವಾಗಿದ್ದು ವಿಜ್ರಂಭಣೆಯಿಂದ ನಡೆಸಲು ಎಲ್ಲರ ಸಹಕಾರ ಬೇಕು ಎಂದು ವಿನಂತಿಸಿದರು. ಕಂಬಳ ಸಮಿತಿಯ ಪದಾಧಿಕಾರಿಗಳಾದ ರಾಮಚಂದ್ರನಾಯ್ಕ, ಎಂ ಗೌತಮ್ ಜೈನ್, ನವೀನ್ ಶೆಟ್ಟಿ ಎಡ್ಮೆಮಾರ್, ಭುಜಂಗ ಶೆಟ್ಟಿ ಉತ್ರಂಜೆ, ಕಿರಣ್ ಶೆಟ್ಟಿ ಕೊಲ್ನಾಡು, ವಕೀಲರಾದ ಚಂದ್ರಶೇಖರ್,ಶಶೀಂದ್ರ ಸಾಲ್ಯಾನ್, ಉಮೇಶ್ ಪೂಜಾರಿ, ಮನ್ಸೂರ್ ಹಳೆಯಂಗಡಿ, ದಿನೇಶ್ ಸುವರ್ಣ ಬೆಳ್ಳಾಯರು,ಧರ್ಮಾನಂದ ಶೆಟ್ಟಿಗಾರ್, ಅಬ್ದುಲ್ ರಜಾಕ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
21/11/2021 05:28 pm