ಮುಲ್ಕಿ:ಯಕ್ಷಗಾನ ಆಟ ನೋಡುವುದು,ಕೂಟ ಕೇಳುವುದಷ್ಟೇ ಅಲ್ಲದೆ ಪ್ರಸಂಗಗಳನ್ನು ಓದಿ ಕಾವ್ಯ ಸೌಂದರ್ಯವನ್ನೂ ಆಸ್ವಾದಿಸುವಂತಾಗಬೇಕು ಎಂದು ವಿದ್ವಾಂಸ ಕಬ್ಬಿನಾಲೆ ವಸಂತ ಭಾರಧ್ವಾಜ್ ಹೇಳಿದರು. ಮುಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಫಣಿಗಿರಿ ಪ್ರತಿಷ್ಟಾನದ ಉದ್ಘಾಟನೆ ಹಾಗೂ ಮೂಲಿಕೆ ವೆಂಕಣ್ಣ ಕವಿ ರಚಿತ ಮಾನಸ ಚರಿತೆ ಶಿರೂರು ಫಣಿಯಪ್ಪಯ್ಯ ರಚಿತ ವಾಜಿಗ್ರಹಣ ಅಥವಾ ಯೌವನಾಶ್ವ ಕಾಳಗ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಯಕ್ಷಗಾನವು ಜನರಿಗೆ ಬೌದ್ಧಿಕ ಬೆಳಕನ್ನು ನೀಡುವ ಕಲೆಯೂ ಹೌದು ಎಂದು ಅವರು ಹೇಳಿದರು.
ಧರ್ಮದರ್ಶಿ ಹರಿಕೃಷ್ನ ಪುನರೂರು, ಕೆ.ಎಲ್. ಕುಂಡಂತಾಯ, ದಾಮೋದರ ಕುಡ್ವ. ಅತುಲ್ ಕುಡ್ವ. ಭುವನಾಭಿರಾಮ ಉಡುಪ, ನರಸಿಂಹ ಪೈ. ಎಸ್. ಉಮೇಶ್. ಸತ್ಯನಾರಾಯಣ. ನಂದಳಿಕೆ ಬಾಲಚಂದ್ರ ರಾವ್. ದಿನೇಶ್ ಉಪ್ಪೂರು. ರಾಜಗೋಪಾಲ್ ಕನ್ಯಾನ ಕೃಷ್ಣಮೂರ್ತಿ ಬ್ರಹ್ಮಾವರ ಮತ್ತಿತರರಿದ್ದರು.
Kshetra Samachara
20/11/2021 03:52 pm