ಮಂಗಳೂರು: ಯಕ್ಷಗಾನದ ತವರೂರು ಕರಾವಳಿಯಲ್ಲಿ ನವೆಂಬರ್ ಬಳಿಕ ಚೆಂಡೆ- ಮದ್ದಳೆ ನಿನಾದ, ಭಾಗವತಿಕೆಯ ಏರುಧ್ವನಿ ಮಾರ್ದನಿಸುತ್ತವೆ.
ಗಡಿ ಜಿಲ್ಲೆ ಕಾಸರಗೋಡಿನಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆವರೆಗೂ ಯಕ್ಷಗಾನದ್ದೇ ಅಧಿಪತ್ಯ. ಇದೀಗ ಕೊರೊನಾ ಹಿಡಿತಕ್ಕೆ ಬಂದು, ಕಡಿಮೆಯಾದ ಹಿನ್ನೆಲೆಯಲ್ಲಿ ಯಕ್ಷಗಾನ ತಿರುಗಾಟಕ್ಕೆ ಎಲ್ಲ ಮೇಳಗಳು ಸಜ್ಜುಗೊಂಡಿವೆ.
ಈಗಾಗಲೇ ಹಟ್ಟಿಯಂಗಡಿ ಮೇಳ ತಿರುಗಾಟ ಆರಂಭಿಸಿದೆ. ಧರ್ಮಸ್ಥಳ ಮೇಳ ಒಂದು ತಿಂಗಳ ಕಾಲ ಧರ್ಮಸ್ಥಳ ದೇವಸ್ಥಾನದಲ್ಲಿಯೇ ಪ್ರದರ್ಶನ ನೀಡಲಿದೆ. ಡಿಸೆಂಬರ್ 5ರ ಬಳಿಕ ಈ ಬಾರಿಯ ತಿರುಗಾಟ ಪಯಣ ಆರಂಭಿಸಲಿದೆ.
ಇದೀಗ ತೆಂಕುತಿಟ್ಟಿನ ಖ್ಯಾತ ಭಾಗವತ, ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದ ಪಾವಂಜೆ ಮೇಳದ ಎರಡನೇ ವರ್ಷದ ತಿರುಗಾಟ ನ.16ರಂದು ಆರಂಭವಾಗಿದೆ. ಮೇ 25ರ ವರೆಗೆ ಒಟ್ಟು ಆರು ತಿಂಗಳ ವರೆಗೆ ಪಾವಂಜೆ ಮೇಳ ಕಾಲಮಿತಿಯ ಪ್ರದರ್ಶನ ನೀಡಲಿದೆ. ಈಗಾಗಲೇ ಪ್ರದರ್ಶನದ ಎಲ್ಲ ದಿನಾಂಕ ಬುಕ್ಕಿಂಗ್ ಆಗಿದ್ದು, ಈ ಬಾರಿ ಮೇಳ 191 ಪ್ರದರ್ಶನ ನೀಡಲಿದೆ.
ನ. 29ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳು ತಿರುಗಾಟ ಆರಂಭಿಸಲಿದೆ.
Kshetra Samachara
18/11/2021 03:55 pm