ಮುಲ್ಕಿ: ಯಕ್ಷಾಭಿಮಾನಿಗಳ ಹಾಗೂ ಭಕ್ತಾಭಿಮಾನಿಗಳ ಬಹುನಿರೀಕ್ಷೆಯ ತೆಂಕುತಿಟ್ಟಿನ ಖ್ಯಾತ ಭಾಗವತ ದ್ರುವ ಪಟ್ಲ ಸತೀಶ್ ಶೆಟ್ಟಿ ಸಾರಥ್ಯದಲ್ಲಿ ಶ್ರೀ ಜ್ಜಾನಶಕ್ತಿ ಸುಬ್ರಮಣ್ಯಸ್ವಾಮೀ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಯ ಎರಡನೇ ವರ್ಷದ ತಿರುಗಾಟ ಮಂಗಳವಾರ ಸೇವೆಯಾಟದೊಂದಿಗೆ ಆರಂಭವಾಯಿತು.
ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ನಡೆದು ಕಲಾವಿದರಿಗೆ ಗೆಜ್ಜೆ ಹಸ್ತಾಂತರದ ಮೂಲಕ ಮೇಳದ ತಿರುಗಾಟಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭ ವೇದ ಕೃಷಿಕ ಕೆಎಸ್ ನಿತ್ಯಾನಂದ ಮಾತನಾಡಿ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುವ ಮೂಲಕ ಎಲ್ಲರೂ ಏಕತೆಗೆ ಶ್ರಮಿಸೋಣ ಯಕ್ಷಗಾನ ನಿರಂತರವಾಗಲಿ ಎಂದರು.
ಮಾಜಿ ಸಚಿವ ಅಭಯಚಂದ್ರ ಜೈನ್, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ತುಳು ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಡಾ. ಪ್ರಭಾಕರ ಜೋಶಿ, ಮಟ್ಟಾರು ರತ್ನಾಕರ ಹೆಗ್ಡೆ, ರವೀಂದ್ರ ಉಳಿದೊಟ್ಟು, ದೇವಳದ ಆಡಳಿತ ಮೊಕ್ತೇಸರ ಎಂ.ಶಶೀಂದ್ರ ಕುಮಾರ್, ಧರ್ಮದರ್ಶಿ ಡಾ.ಯಾಜೀ ನಿರಂಜನ್ ಭಟ್ ಮೇಳದ ಕಲಾವಿದರು ಉಪಸ್ಥಿತರಿದ್ದರು.
ಬಳಿಕ ವೇದಿಕೆಯಲ್ಲಿ ಯಕ್ಷಗಾನ ಪ್ರದರ್ಶನ ನಡೆಯಿತು.
Kshetra Samachara
16/11/2021 08:23 pm