ಮುಲ್ಕಿ: ಕಿನ್ನಿಗೋಳಿ ಸಮೀಪದ ಬಳ್ಕುಂಜೆ ಸಂತ ಪೌಲರ ಪ್ರೌಢಶಾಲೆಯಲ್ಲಿ 1986 ರ ಎಸ್ ಎಸ್ ಎಲ್ ಸಿ ಬ್ಯಾಚಿನ ಪುನರ್ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಸಂಸ್ಧೆ ಯ ಸಭಾಂಗಣದಲ್ಲಿ ನಡೆಯಿತು.ಸಿಸ್ಟರ್ ಕ್ರಿಸ್ಟೆಲಾ ಅಧ್ಯಕ್ಷತೆ ವಹಿಸಿದ್ದರು.
ಸುಮಾರು ಮೂರು ವರೆ ದಶಕಗಳ ನಂತರದಲ್ಲಿ ಒಟ್ಟುಗೂಡಿದ ಪೂರ್ವ ವಿದ್ಯಾರ್ಥಿ ಗಳು ಹಾಗೂ ಅಧ್ಯಾಪಕರು ತಮ್ಮ ನೆನಪು ಗಳನ್ನು ಮೆಲುಕು ಹಾಕಿದರು.ಅಧ್ಯಾಪಕರನ್ನು ಶಾಲು ಹೊದಿಸಿ ಫಲಪುಷ್ಪ ನೀಡಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು.
ನಿವೃತ್ತ ಅಧ್ಯಾಪಕರಾದ ಸಿಸ್ಟರ್ ಮೆರಿಲಿಟ,ಪಿ. ಅರ್. ನಾಯಕ್, ಸಿಸ್ಟರ್ ಡಯಾನಾ,ಸಿಸ್ಟರ್ ವಿಲ್ಮಾ, ಮಧುಕರ ನಾಯಕ್ ಶುಭ ಹಾರೈಸಿದರು.ಸಿರಾಜ್ ಬಿ ಹಾಗೂ ಹಸೈನಾರ್ ಅನಿಸಿಕೆ ಹಂಚಿಕೊಂಡರು. ಜಾನೆಟ್ ಡಿಮೆಲ್ಲೋ ,ಜೂಲಿಯನ ಡಿಸೋಜಾ, ಮನೋಹರ್ ಶೆಟ್ಟಿ ,ಸಿಸ್ಟರ್ ಲಿಡಿಯಾ ,ವಿನ್ಸೆಂಟ್ ಪಿಂಟೋ ,ರೆಜಿನಾಲ್ಡ್ ರೊಡ್ರಿಗಸ್, ಇಬ್ರಾಹಿಂ ತೀರ್ಥಹಳ್ಳಿ ,ರೊನಾಲ್ಡ್ ಸೀಕ್ವೆರಾ,ಜೇಮ್ಸ್ ,ಅಜೀಜ್, ವಸಂತ ಆಚಾರ್, ಸುಲೇಮಾನ್ , ಹರೀಶ್ ಶೆಟ್ಟಿ ,ರೊನಾಲ್ಡ್ ಕರ್ನಿರೆ, ಲಿಯೋನಿಟ , ವಾಯ್ಲೆಟ್ ನೋರೋನ , ಅನಿತ ಸಲ್ದಾನ, ಚಂದ್ರಶೇಖರ ಶೆಟ್ಟಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Kshetra Samachara
16/11/2021 03:24 pm