ಪುತ್ತೂರು: ಗಡಿ ಭದ್ರತಾ ಪಡೆ (ಬಿಎಸ್ ಎಫ್) ಗೆ ಆಯ್ಕೆಯಾಗಿ, ತರಬೇತಿ ಮುಗಿಸಿ ಹುಟ್ಟೂರಿಗೆ ಆಗಮಿಸಿದ ರಮ್ಯಾ ದೇವಸ್ಯ ಅವರಿಗೆ ಊರ ಮಂದಿ ಆತ್ಮೀಯವಾಗಿ ಸ್ವಾಗತಿಸಿ, ಸನ್ಮಾನಿಸಿದರು.
ಬಲ್ನಾಡು ದೇವಸ್ಯ ತೇಜಾವತಿ ಮತ್ತು ಪದ್ಮಯ್ಯ ಗೌಡ ದಂಪತಿ ಪುತ್ರಿ ರಮ್ಯಾ ದೇವಸ್ಯ ಅವರನ್ನು ಬಲ್ನಾಡು ಗ್ರಾಮಸ್ಥರು ಪುತ್ತೂರು ಬೈಪಾಸ್ ಬಳಿ ಅದ್ಧೂರಿಯಾಗಿ ಸ್ವಾಗತಿಸಿದರು.
ಮಧ್ಯಪ್ರದೇಶದಲ್ಲಿ ತರಬೇತಿ ಪೂರೈಸಿದ ಬಳಿಕ ರಮ್ಯಾ, ಮಂಗಳೂರು ಮೂಲಕ ತನ್ನ ಮನೆಗೆ ತೆರಳುತ್ತಿದ್ದ ಸಂದರ್ಭ ಬಲ್ನಾಡು ಕ್ರಾಸ್ ಬಳಿ ಗ್ರಾಮದ ಜನರು ಬರಮಾಡಿಕೊಂಡರು.
ಬಳಿಕ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಮನೆಯ ತನಕ ಸಾಗಿದರು. ಮಳೆ ಇದ್ದರೂ ಗ್ರಾಮ ನಿವಾಸಿಗಳು ಕಾರ್ಯಕ್ರಮದಲ್ಲಿ ಉತ್ಸಾಹದಿಂದಲೇ ಭಾಗವಹಿಸಿದ್ದರು.
Kshetra Samachara
14/11/2021 06:52 pm