ಬೈಂದೂರು: ಬೈಂದೂರು ತಾಲ್ಲೂಕಿನ ಮರವಂತೆಯಲ್ಲಿ 'ಸ್ವಚ್ಛತಾ ಮಾಸ' ಎಂಬ ಮಾದರಿಯ ಕಾರ್ಯಕ್ರಮವನ್ನು ಹಲವು ದಿನಗಳಿಂದ ಗ್ರಾಮ ಪಂಚಾಯಿತಿ ಸದಸ್ಯರು ಹಮ್ಮಿಕೊಳ್ಳಲಾಗಿದೆ. ಇಂದು ವಿಶೇಷವಾಗಿ ಮಕ್ಕಳ ದಿನಾಚರಣೆಯ ಅಂಗವಾಗಿ ಚಿಣ್ಣರು ಸ್ವಯಂಪ್ರೇರಿತರಾಗಿ ಒಂದಷ್ಟು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದರು. ಮಕ್ಕಳು ಒಂದೆರಡು ಗಂಟೆಗಳ ಕಾಲ ಊರಿನ ಹೃದಯ ಭಾಗದ ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕದಲ್ಲಿ ಪ್ಲಾಸ್ಟಿಕ್ ಬಾಟಲಿ ಮತ್ತು ಪ್ಲಾಸ್ಟಿಕ್ ಚೀಲಗಳನ್ನು ಸಂಗ್ರಹಿಸಿದರು.
ಸುಮಾರು ನಾಲ್ಕು ಚೀಲದಷ್ಟು ಬಾಟಲಿ, ಮೂರು ಚೀಲದಷ್ಟು ಪ್ಲಾಸ್ಟಿಕ್ ಹಾಗೂ ಕಸ ಸಂಗ್ರಹಿಸಲಾಯಿತು. ಸ್ವಚ್ಛತೆಯಲ್ಲಿ ಮರವಂತೆಯ ಮಕ್ಕಳ ಆಸಕ್ತಿಯನ್ನು ಕಂಡು ಊರಿನ ಜನರು ಶುಭ ಹಾರೈಸಿದರು. ಲಂಡನ್ ಡೈರಿ ಪುಸ್ತಕಗಳ ಖ್ಯಾತಿಯ ಬರಹಗಾರ ಯೋಗೀಂದ್ರ ಮರವಂತೆಯವರು ಮಕ್ಕಳಿಗೆ ಉಪಾಹಾರದ ವ್ಯವಸ್ಥೆ ಮಾಡಿಸಿದ್ದರು.
Kshetra Samachara
14/11/2021 12:46 pm