ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರೇಟ್ ಕಚೇರಿ ಸಭಾಂಗಣದಲ್ಲಿ ಇಂದು ‘ಪದ್ಮಶ್ರೀ’ ಪುರಸ್ಕೃತ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.
ನಿವೃತ್ತ ಐಜಿಪಿ ಗೋಪಾಲ ಬಿ. ಹೊಸೂರು ಶ್ಲಾಘಿಸಿ ಮಾತನಾಡಿದರು. ಹಾಜಬ್ಬ ಅವರ ಕುರಿತು ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ಮಾತನಾಡಿದರು.
ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಉಪಸ್ಥಿತರಿದ್ದರು. ಎಸಿಪಿ ಪಿ.ಎ. ಹೆಗಡೆಯವರು ನಿವೃತ್ತ ಐಜಿಪಿ ಗೋಪಾಲ ಹೊಸೂರು ಅವರ ಪರಿಚಯ ನೀಡಿದರು. ಎಸಿಪಿ ನಟರಾಜ್ ನಿರೂಪಿಸಿದರು.
Kshetra Samachara
12/11/2021 05:23 pm