ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಶಿಕ್ಷಣ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ಭ್ರಮರ ಇಂಚರ ನುಡಿಹಬ್ಬ ಇದೇ ಬರುವ ನವಂಬರ್ 13 ಮತ್ತು 14 ರಂದು ಕಟೀಲು ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಇದಕ್ಕಾಗಿ ಪೂರ್ವ ತಯಾರಿ ನಡೆಯುತ್ತಿದ್ದು, ಪದವಿಪೂರ್ವ ಕಾಲೇಜು ಮತ್ತು ಪ್ರೌಢ ಶಾಲೆಯಲ್ಲಿ ಸಂಪೂರ್ಣ ಸಿದ್ಧತೆಗಳು ನಡೆಯುತ್ತಿದೆ, ಈಗಾಗಲೇ ಶ್ರೀ ವಿದ್ಯಾ ಸಭಾಭವನ ತಯಾರಾಗುತ್ತಿದ್ದು ಆಕರ್ಷಕವಾಗಿ ಕಾಣುವಂತೆ ಶೃಂಗರಿಸಲಾಗಿದೆ.
ಶಾಲೆಯ ಹೊರಭಾಗದ ಗೋಡೆಗಳಲ್ಲಿ ವಿವಿಧ ಶ್ಲೋಕವಿರುವ ಕಲಾಕೃತಿಗಳನ್ನು ಅಳವಡಿಸಲಾಗಿದೆ, ವಿಶೇಷವೆಂದರೆ ಹಳೆಯ ರಟ್ಟು, ಮತ್ತಿತರ ವಸ್ತುಗಳು ವಿದ್ಯಾರ್ಥಿಗಳ ಸಹಾಯದಿಂದ ಜೀವಕಳೆ ಪಡೆದಿದೆ ವಿವಿಧ ರೀತಿಯ ಮುಖವಾಡದಂತೆ ಗೋಚರಿಸುತ್ತಿದೆ,
ಸಾಹಿತಿ ಶ್ರೀಧರ ಡಿ.ಎಸ್. ಅಧ್ಯಕ್ಷತೆಯಲ್ಲಿ ನಡೆಯುವ ಸಮ್ಮೇಳನಕ್ಕಿಂತ ಮುಂಚಿತ ಮೆರವಣಿಗೆ ನಡೆಯಲಿದೆ.
ಬಳಿಕ ಸಂಸದ ನಳಿನ್ ಕುಮಾರ್ ಕಟೀಲ್ ನುಡಿಹಬ್ಬ ಉದ್ಘಾಟಿಸಲಿದ್ದು, ಶಾಸಕ ಉಮಾನಾಥ ಕೋಟ್ಯಾನ್ ವಸ್ತುಪ್ರದರ್ಶನ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಧಕರ ಜೊತೆ ಸಂವಾದ, ಕವಿಗೋಷ್ಠಿ, ಯಕ್ಷಗಾನ ಸಾಹಿತ್ಯ ಮತ್ತಿತರ ಕಾರ್ಯಕ್ರಮಗಳು ನಡೆಯಲಿದೆ.
Kshetra Samachara
11/11/2021 10:07 pm