ಉಡುಪಿ: ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ವತಿಯಿಂದ ಗಾಲಿ ಕುರ್ಚಿಯ ವಿತರಣೆಯು ಗುರುವಾರ ಮಣಿಪಾಲದ ದಶರಥ ನಗರದಲ್ಲಿ ನಡೆಯಿತು.
ವೃದ್ಧರೋರ್ವರು ಬಿದ್ದು ಸೊಂಟದ ಸ್ವಾಧೀನ ಕಳೆದುಕೊಂಡು ನಡೆಯಲಾಗದೆ ಮಲಗಿದ್ದಲ್ಲಿಯೇ ದಿನಗಳನ್ನು ಕಳೆಯುತ್ತಿದ್ದರು. ವೃದ್ಧರ ಅಸಹಾಯಕತೆಗೆ ನಾಗರಿಕ ಸಮಿತಿ ಸ್ಪಂದಿಸಿತು. ಸಹನಾ ಕೋಡಿ ಕುಂದಾಪುರ ಅವರು ಗಾಲಿ ಕುರ್ಚಿ ಕೊಡುಗೆಯಾಗಿ ನೀಡಿ ಸಹಕರಿಸಿದರು. ವಿತರಣೆ ಸಮಯದಲ್ಲಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಅಭಿಜಿತ್ ಕುಮಾರ್ ಕೊಣಾಜೆ, ತಾರಾನಾಥ್ ಮೇಸ್ತ ಶಿರೂರು, ಪವಿತ್ರ ರಾವ್ ಉಪಸ್ಥಿತರಿದ್ದರು.
Kshetra Samachara
11/11/2021 05:02 pm