ಮುಲ್ಕಿ: ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗೆ ಸಹಿತ ಕೋವಿಡ್ ದಿನಗಳಲ್ಲಿ ಸಂಕಷ್ಟಕ್ಕೀಡಾದ ವರಿಗೆ ಸಹಾಯ ಹಸ್ತ ನೀಡುವ ಮುಖಾಂತರ ಗ್ರಾಹಕರ ಹಾಗೂ ಸದಸ್ಯರ ಹಿತಾಸಕ್ತಿಗೆ ಪಿಸಿಎ ಬ್ಯಾಂಕ್ ಬದ್ಧವಾಗಿದೆ ಎಂದು ಸಂಘದ ಅಧ್ಯಕ್ಷ ಎಸ್.ಎಸ್, ಸತೀಶ್ ಭಟ್ ಹೇಳಿದರು.
ಅವರು ಪಡುಪಣಂಬೂರು ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಪಿಸಿಎ ಬ್ಯಾಂಕ್ ಶೇರು ದಾರರಿಗೆ ಶೇ. 18 ಲಾಭಾಂಶವನ್ನು ಈ ಬಾರಿ ವಿತರಿಸಲಾಗಿದೆ ಎಂದ ಅವರು ಪ್ರಸ್ತುತ ವರ್ಷದಲ್ಲಿ 10 ಕೋ.ರೂ. ಠೇವಣಿ ಸಂಗ್ರಹಗೊಂಡಿದೆ. 65 ಲಕ್ಷ ರೂ. ಸಾಲ ನೀಡಲಾಗಿದೆ, ಕೋವಿಡ್ ಸಮಯದಲ್ಲಿ ಗರಿಷ್ಠ ಸಹಕಾರ ನೀಡಲಾಗಿದೆ,140 ಸ್ವಸಹಾಯ ಸಂಘಗಳಿದ್ದು, 3 ನೀಲಕ್ಷ ರೂ. ವೈದ್ಯಕೀಯ ಹಾಗೂ 4 ಲಕ್ಷ ರೂ. ಶೈಕ್ಷಣಿಕ ನೆರವನ್ನು ನೀಡಲಾಗುತ್ತಿದೆ ಎಂದರು.
ಉಪಾಧ್ಯಕ್ಷ ಶ್ಯಾಮ್ ಪ್ರಸಾದ್, ನಿರ್ದೇಶಕರಾದ ವಿನೋದ್ ಕುಮಾರ್ ಬೊಳ್ಳೂರು, ಗೀತಾ ಆರ್ ಶೆಟ್ಟಿ ಯೋಗೀಶ್ ಪಾವಂಜೆ ವಸಂತ ಬೆರ್ನಾರ್ಡ್, ಮೀರಾಬಾಯಿ, ರೋಹಿಣಿ ಬಿ. ಶೆಟ್ಟಿ, ಆಶೋಕ್ ಬಂಗೇರ, ಮುಖೇಶ್ ಸುವರ್ಣ, ದಿವ್ಯಾ, ಶಂಕರ, ನಾಮನಿರ್ದೇಶಕ ರಾಜೇಶ್ ದಾಸ್ ಉಪಸ್ಥಿತರಿದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಿಮಕರ ಸುವರ್ಣ ನಿರೂಪಿಸಿದರು.
Kshetra Samachara
11/11/2021 08:02 am