ಮುಲ್ಕಿ: ಮುಲ್ಕಿ ರೋಟರಿ ಕ್ಲಬ್ ವತಿಯಿಂದ ದೀಪಾವಳಿ ಸಂಭ್ರಮಾಚರಣೆ ಕಾರ್ಯಕ್ರಮ ರೋಟರಿ ಕ್ಲಬ್ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಶಿವರಾಮ ಜಿ ಅಮೀನ್ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ನಿರ್ದೇಶಕ ಗಣೇಶ್ ಅಮೀನ್ ಸಂಕಮಾರ್ ದೀಪಾವಳಿ ಸಂದೇಶ ನೀಡಿ ಯುವಜನಾಂಗಕ್ಕೆ ಪುರಾತನ ಕಾಲದ ದೀಪಾವಳಿ ಆಚರಣೆ ಮಹತ್ವಗಳನ್ನು ತಿಳಿಸುವ ಮುಖಾಂತರ ತುಳುನಾಡ ಸಂಸ್ಕೃತಿ, ಸಂಸ್ಕಾರ ಉಳಿಸುವ ಮುಲ್ಕಿ ರೋಟರಿ ಕ್ಲಬ್ ಕಾರ್ಯ ಅಭಿನಂದನೀಯ ಎಂದರು.
ವೇದಿಕೆಯಲ್ಲಿ ಮುಖ್ಯಅತಿಥಿಗಳಾಗಿ ಸಹಾಯಕ ಗವರ್ನರ್ ಅರುಣ್ ಭಂಡಾರಿ, ವಲಯ ಸೇನಾನಿ ಅಶೋಕ್ ಕುಮಾರ್ ಶೆಟ್ಟಿ, ಸಂಘ ಸೇವೆ ನಿರ್ದೇಶಕರಾದ ಜಿನರಾಜ ಸಿ ಸಾಲ್ಯಾನ್, ಕಾರ್ಯದರ್ಶಿ ರವಿಚಂದ್ರ, ನಿಯೋಜಿತ ಸಹಾಯಕ ಗವರ್ನರ್ ನಾರಾಯಣ್, ವೈಎನ್ ಸಾಲ್ಯಾನ್, ಮಲ್ಲಿಕಾರ್ಜುನ ಆರ್.ಕೆ. ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮುಲ್ಕಿ ಸಮಾಜ ಸೇವಾ ಸಂಘದ ಅಧ್ಯಕ್ಷ ರಮೇಶ್ ಅಮೀನ್ ಕೊಕ್ಕರಕಲ್ ಹಾಗೂ ಪದಾಧಿಕಾರಿಗಳನ್ನು ಗೌರವಿಸಲಾಯಿತು.
Kshetra Samachara
10/11/2021 09:15 pm