ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ : ಲಯನ್ಸ್ ಕ್ಲಬ್ ಆಶ್ರಯದಲ್ಲಿ ಕನ್ನಡ ಡಿಂಡಿಮ ಕಾರ್ಯಕ್ರಮ

ಕಾರ್ಕಳ: ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಸು ಮನುಷ್ಯನಿಗೆ ಇರಬೇಕೇ ಹೊರತು ಆತನಲ್ಲಿ ಐಶ್ವರ್ಯ ಮಾತ್ರ ಇದ್ದರೆ ಪ್ರಯೋಜನ ಇಲ್ಲ. ಅದರ ಸದ್ಬಳಕೆ ಆಗಬೇಕು. ಆಗ ಮಾತ್ರ ಆ ಐಶ್ವರ್ಯಕ್ಕೆ ಬೆಲೆ ಬರುತ್ತದೆ. ನಾವು ಮಾಡುವ ಸಮಾಜ ಸೇವೆ ಸಮಾಜ ಮುಖಿಯಾಗಿ ಜನಮಾನಸದಲ್ಲಿ ಉಳಿಯಬೇಕು ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಶೆಣೈ ತಿಳಿಸಿದರು.

ಕಾರ್ಕಳದ ಎಸ್.ವಿ.ಟಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಯನ್ಸ್ ಕ್ಲಬ್‌ನಿಂದ ನಡೆದ ಕನ್ನಡ ಡಿಂಡಿಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ಸಮಾಜದ ಆಗು ಹೋಗುಗಳ ಬಗ್ಗೆ ಸ್ಪಂದಿಸುವ ಗುಣಗಳನ್ನು ನಾವು ಹೊಂದಬೇಕು. ಬೇರೆಯವರ ಸಮಸ್ಯೆಗಳನ್ನು ಬಗೆಹರಿಸಲು ನಾವು ಪ್ರಯತ್ನಿಸುವುದರಲ್ಲಿ ನಮ್ಮ ಸಂತೋಷ ಕಾಣುವಂತಾಗಬೇಕು. ಆಗ ಖಂಡಿತವಾಗಿಯೂ ನಮ್ಮ ಜೇವನ ಸಾರ್ಥಕವಾಗುತ್ತದೆ ಎಂದರು.

ಲಯನ್ಸ್ ಮಿಥುನ್ ಹೆಗ್ಡೆ ಮಾತನಾಡಿ, ಕಳೆದ 4 ತಿಂಗಳಲ್ಲಿ ಅಧ್ಯಕ್ಷ ರಾಜೇಶ್ ಶೆಣೈ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಕಾರ್ಕಳ ಘಟಕವು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಕನ್ನಡ ನಾಡು ನುಡಿ ಜೊತೆಗೆ ಸಮಾಜದ ಬಡಜನತೆ, ವಿದ್ಯಾರ್ಥಿಗಳು ಹಾಗೂ ಶ್ರಮಿಕ ವರ್ಗದ ಜನರಿಗೆ ಯಾವುದೇ ಪ್ರತಫಲಾಪೇಕ್ಷೆ ಇಲ್ಲದೆ ನಿರಂತರ ಒಂದಲ್ಲ ಒಂದು ಸಹಾಯವನ್ನು ನೀಡುತ್ತಿರುವ ರಾಜೇಶ್ ಶೆಣೈ ನಿಜವಾಗಿಯೂ ಅಭಿನಂದನಾರ್ಹರು ಎಂದರು.

ಈ ಸಂದರ್ಭದಲ್ಲಿ ಎಸ್.ವಿ.ಟಿ ಹಿರಿಯ ಪ್ರಾಥಮಿಕ ಶಾಲೆಗೆ ರಾಜೇಶ್ ಶೆಣೈ ಅವರು ಲಯನ್ಸ್ ಕ್ಲಬ್ ಮುಖಾಂತರ ಕಂಪ್ಯೂಟರ್, ಪ್ರಿಂಟರ್, ಯುಪಿಎಸ್ ಹಾಗೂ ಸುಮಾರು 300 ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ಎಸ್‌ ವಿ ಟಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಂಡಳಿ ಕಾರ್ಯದರ್ಶಿ ಕೆ ಪಿ ಶೆಣೈ, ಟ್ರಸ್ಟಿ ರವೀಂದ್ರ ಪೈ ಲಯನ್ಸ್ ವಲಯಾಧ್ಯಕ್ಷ ಸುಭಾಸ್ ಸುವರ್ಣ,ಕೋಶಾಧಿಕಾರಿ ಪ್ರಕಾಶ್ ಪಿಂಟೋ ಡಾ.ರಾಬರ್ಟ್ ಡಿಮೆಲ್ಲೊ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

10/11/2021 09:05 pm

Cinque Terre

2.1 K

Cinque Terre

0