ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿಯಲ್ಲಿ 50 ಬಡ ಮಹಿಳೆಯರ ಮದುವೆ

ಉಡುಪಿ: ಸಂಘಟನೆಯ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ 50 ಬಡ ಅನಾಥ ಯುವತಿಯರ ಮದುವೆ ನಿರ್ವಹಿಸಿದ ಹೆಗ್ಗಳಿಕೆಗೆ ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಮ್ ಪಾತ್ರವಾಗಿದೆ. ಈ ಹಿನ್ನೆಲೆಯಲ್ಲಿ ಘಟಕದ ಪದಾಧಿಕಾರಿಗಳಿಗೆ ಕೃತಜ್ಞತಾ ಸಮಾರಂಭ ಕಾರ್ಯಕ್ರಮ ಶಾದಿ ಮಹಲ್ ನಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಘಟನೆಯ ಸ್ಥಾಪಕರು ಹಾಗೂ ರಾಷ್ಟ್ರೀಯ ಅಧ್ಯಕ್ಷರಾಗಿರುವ ಜನಾಬ್ ಶಕೀಲ್ ಹಸನ್ ಕೇವಲ 30 ತಿಂಗಳ ಹಿಂದೆ 40 ಸದಸ್ಯರಿಂದ ಆರಂಭಗೊಂಡು ಇಂದು ರಾಷ್ಟ್ರವ್ಯಾಪಿಯಾಗಿ ಜಮ್ಮುಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವ್ಯಾಪಿಸಿದ್ದು ದೇಶದ 27 ರಾಜ್ಯಗಳಲ್ಲಿ ಹಾಗೂ ವಿದೇಶದಲ್ಲಿ 22 ರಾಷ್ಟ್ರಗಳಲ್ಲಿ ತನ್ನ ಸಾಮಾಜಿಕ ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿದೆ.ಸಂಘಟನೆ ಸ್ಥಾಪನೆಯಾದ ನೆಲದಲ್ಲೇ ಕೇವಲ ಒಂದೇ ಘಟಕದಿಂದ ಈವರೆಗೆ 50 ಕ್ಕಿಂತಲೂ ಹೆಚ್ಚಿನ ಬಡ ಅನಾಥ ಸಮುದಾಯದ ಯುವತಿಯರಿಗೆ ವಿವಾಹದ ಜವಾಬ್ದಾರಿ ಹೊತ್ತು ಅದರಲ್ಲಿ ಯಶಸ್ವಿಯಾಗಿದ್ದು ಹೆಮ್ಮೆಯ ವಿಷಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ರಾಷ್ಟ್ರೀಯ ಸಮಿತಿ ಸದಸ್ಯೆ ಲುಬ್ನ ಹಯಾತ್ , ರಾಜ್ಯ ಉಪಾಧ್ಯಕ್ಷರಾಗಿರುವ ಫರೀದ್ ನದಾಫ್, ಕರ್ನಾಟಕ ರಾಜ್ಯ ಮಹಿಳಾ ಘಟಕದ ಕಾರ್ಯಧ್ಯಕ್ಷೆಯಾಗಿರುವ ತಬಸ್ಸುಮ್ ಬೇಗಂ , ವಿದ್ಯಾರ್ಥಿ ಘಟಕದ ರಾಜ್ಯ ಉಪಾಧ್ಯಕ್ಷೆ ನಿಲೋಫರ್ ಖಾನಂ , ಜಿಲ್ಲಾಧ್ಯಕ್ಷರಾಗಿರುವ ಅಷ್ಪಾಕುಲ್ಲಾಹ್ ಖಾನ್ , ಚೆನ್ನಗಿರಿ ತಾಲೂಕು ಅಧ್ಯಕ್ಷರಾಗಿರುವ ಇಮ್ತಿಯಾಜ್ ಕೆರೆಕಟ್ಟೆ , ರಫೀವುಲ್ಲಾಹ್ , ದಾವಣಗೆರೆ ನಗರ ಗೌರವಾಧ್ಯಕ್ಷರಾಗಿರುವ ಮೊಹಿಯುದ್ದೀನ್ ಪಾಶ , ರಾಜ್ಯ ಸಮಿತಿ ಸದಸ್ಯರಾಗಿರುವ ರೆಹಾನ್ ಮೊಹಮ್ಮದ್ ಚೋರಡಿ , ಸಲ್ಮಾನ್ ಖಾನ್ ಕೆರೆಬಿಳಚಿ , ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಹನೀಫ್ ಖಾನ್ ಸಾಬ್ , ಮೊಹಮ್ಮದ್ ಮುಜೀಬುಲ್ಲಾಹ್ , ಚೆನ್ನಗಿರಿ ತಾಲೂಕು ಅಧ್ಯಕ್ಷರಾದ ಸಯ್ಯದ್ ಜೀಲಾನಿ.ಅಥಾವುಲ್ಲಾ ಬಸವಾಪಟ್ಟಣ , ಖಲಂದರ್ ಬಸವಾಪಟ್ಟಣ , ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

08/11/2021 01:37 pm

Cinque Terre

6.36 K

Cinque Terre

0