ಕಾರ್ಕಳ: ಭಾರತೀಯ ವೈದ್ಯಕೀಯ ಸಂಘದ ರಾಜ್ಯಾಧ್ಯಕ್ಷರಾಗಿ ಕಾರ್ಕಳದ ಖ್ಯಾತ ಮಕ್ಕಳ ತಜ್ಞ ಡಾ.ಕಟೀಲು ಸುರೇಶ್ ಕುಡ್ವರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರು 1981ರಿಂದ 40 ವರ್ಷಗಳ ಕಾಲ ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ , ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಭಾರತೀಯ ವೈದ್ಯಕೀಯ ಸಂಘದ ವಿವಿಧ ಹುದ್ದೆ ಗಳನ್ನು ನಿಭಾಯಿಸಿ ಇದೀಗ ರಾಜ್ಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಯಾದ ಇವರು 1965_1966ರಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ಡಾ.ಟಿ ಎಂ ಎ ಪೈಯವರ ನಂತರ ಕಾರ್ಕಳದ ಡಾ. ಕಟೀಲು ಸುರೇಶ್ ಕುಡ್ವ ಎರಡನೇಯವರಾಗಿದ್ದಾರೆ.
ಇವರು ರೋಟರಿ, ಜೇಸಿ , ಲಯನ್ಸ್ , ರೆಡ್ ಕ್ರಾಸ್ ಮುಂತಾದ ಸಂಸ್ಥೆ ಗಳಲ್ಲಿ ವೈದ್ಯಕೀಯ ಹಾಗೂ ಸಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು 1987ರಲ್ಲಿ ರೋಟರಿ ಇಂಟರ್ ನ್ಯಾಷನಲ್ ಗವರ್ನರ್ ಪ್ರಶಸ್ತಿ, 1991ರಲ್ಲಿ ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರಮಟ್ಟದ ಅತ್ಯುತ್ತಮ ಕಾರ್ಯದರ್ಶಿ ಪ್ರಶಸ್ತಿ, 1998ರಲ್ಲಿ ಬೆಸ್ಟ್ ಜೇಸಿ ಜೋನ್ ಪ್ರಶಸ್ತಿ, 2004ರಲ್ಲಿ ದೆಹಲಿ ಭಾರತೀಯ ವೈದ್ಯಕೀಯ ಸಂಘದ ಡಾ ಬಿ ಸಿ ರಾಯ್ ವೈದ್ಯ ಪ್ರಶಸ್ತಿ, 2019ರಲ್ಲಿ ಕರ್ನಾಟಕ ರಾಜ್ಯದ ಡಾ.ಬಿ.ಸಿ ರಾಯ್ ವೈದ್ಯ ಪ್ರಶಸ್ತಿ ಪಡೆದಿದ್ದಾರೆ.
ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಣಿಪಾಲದಲ್ಲಿ ಎಂ. ಬಿ.ಬಿ.ಎಸ್. ನಲ್ಲಿ 2ನೇ ರ್ಯಾಂಕ್ ಪಡೆದು ,ಎಂ ಡಿ ಪಿಡಿಯಾಟ್ರಿಕ್ಸ್ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಮೊದಲ ರ್ಯಾಂಕ್ ಪಡೆದ ಹೆಗ್ಗಳಿಕೆ ಇವರದ್ದು.
Kshetra Samachara
08/11/2021 12:22 pm