ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ರಶ್ಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ‌ಗೌರವಾಭಿನಂದನೆ,ವಿದ್ಯಾರ್ಥಿವೇತನ ವಿತರಣೆ

ಕಾರ್ಕಳ:ಶ್ರೀ ನಾರಾಯಣ ಗುರು ಅವರ 167ನೇ ಜನ್ಮ ದಿನಾಚರಣೆ ಅಂಗವಾಗಿ ರಶ್ಮಿ ಚಾರಿಟೇಬಲ್ ಟ್ರಸ್ಟ್ (ರಿ) ಕಾರ್ಕಳ ವತಿಯಿಂದ‌ ಬಿಲ್ಲವ ಸಮಾಜ ಸೇವಾ ಸಂಘ (ರಿ)ಇವರ ಸಹಯೋಗದೊಂದಿಗೆ ಗೌರವಾಭಿನಂದನೆ,ವಿದ್ಯಾರ್ಥಿವೇತನ ವಿತರಣೆ ಹಾಗೂ ಗೌರವ ಸಮರ್ಪಣಾ ಸಮಾರಂಭ ಕಾರ್ಯಕ್ರಮವು ನವಂಬರ್ 7 ರಂದು ಪೂರ್ವಾಹ್ನ 9 -30 ರಿಂದ ಕಾರ್ಕಳ ಪೆರ್ವಾಜೆಯ ನಾರಾಯಣ ಗುರು ಸಭಾಭವನದಲ್ಲಿ ಅಧ್ಯಕ್ಷರಾದ ಡಿ ಆರ್ ರಾಜುರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಉಡುಪಿ ಜಿಲ್ಲೆಯ ಉಸ್ತುವಾರಿ

ಸಚಿವರಾದ ವಿ ಸುನೀಲ್ ಕುಮಾರ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಡಿಕೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ಡಿವೈಎಸ್ಪಿ ವಿಜಯಕುಮಾರ್, ಬೆಂಗಳೂರು ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ವೇದಕುಮಾರ್ ಎಂ, ಶ್ರೀ ಕ್ರಷ್ಣ ಕ್ಷೇತ್ರ ಆನೆಕೆರೆ ಆಡಳಿತ ಮುಕ್ತೇಸರ ಭಾಸ್ಕರ ಎಸ್ ಕೋಟ್ಯಾನ್, ಶ್ರೇಷ್ಠ ಕ್ರಪಿಕ ಪ್ರಶಸ್ತಿ ಪುರಸ್ಕೃತ ಎಸ್ ಕೆ ಸಾಲಿಯಾನ್, ರಶ್ಮಿ ಚಾರಿಟೇಬಲ್ ಟ್ರಸ್ಟ್ ಅದ್ಯಕ್ಷೆ ಸಾವಿತ್ರಿ ಡಿ ಆರ್ ರಾಜು,ಸದಸ್ಯರಾದ ಚಿತ್ತರಂಜನ್ ಸಾಲಿಯಾನ್ ಭಾಗವಹಿಸಲಿದ್ದಾರೆ.

ಈ ಸಮಾರಂಭದಲ್ಲಿ ಕಾರ್ಕಳ ತಾಲೂಕಿನ ಬಿಲ್ಲವ ಸಮಾಜದ ವಿವಿಧ ಸ್ತರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂತರಾಷ್ಟ್ರೀಯ ಕ್ರೀಡಾ ಪಟುಗಳು, ವೈದರು,‌ ಗ್ರಾಮ ಪಂಚಾಯತಿ ಅದ್ಯಕ್ಷ, ಉಪಾಧ್ಯಕ್ಷರು, ಆರಕ್ಷಕರು, ಅಂಚೆ ಸಿಬ್ಬಂದಿಗಳು, ಆರೋಗ್ಯ ಶುಶ್ರೂಕಿಯರು, ಮತ್ತು ಆಶಾಕಾರ್ಯಕರ್ತರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು ಎಂದು ಬಿಲ್ಲವ ಸಮಾಜ ಸೇವಾ ಸಂಘದ ಅದ್ಯಕ್ಷ ಡಿ ಆರ್ ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

06/11/2021 05:47 pm

Cinque Terre

10.62 K

Cinque Terre

0