ಉಡುಪಿ: ಕಲಾವಿದನೊಬ್ಬ ವಿಶಿಷ್ಟ ರೀತಿಯಲ್ಲಿ ಅಶ್ವತ್ಥ ವೃಕ್ಷದ ಎಲೆಯಲ್ಲಿ 'ಅಪ್ಪು' ಮುಖದ ಪಡಿಯಚ್ಚು ಮೂಡಿಸಿದ್ದಾರೆ. ಚಿತ್ರ ರಚಿಸಿದ ಎಲೆಯನ್ನು ಆಕಾಶದ ಕಡೆಗೆ ಹಿಡಿಯುತ್ತಿದ್ದಂತೆಯೇ, ಪುನೀತ್ ರಾಜಕುಮಾರ್ ಸ್ವತಹಃ ಧರೆಗಿಳಿದು ಬಂದಂತೆ ಭಾಸವಾಗುತ್ತದೆ!.
ಅಶ್ವತ್ಥ ಮರದ ಎಲೆಯ ಮೇಲೆ ಬಗೆ ಬಗೆಯ ಚಿತ್ರಗಳನ್ನು ಮೂಡಿಸುವ ಅಪರೂಪದ ಕಲಾವಿದ ಉಡುಪಿಯ ಮಹೇಶ ಮರ್ಣೆ ಅವರು ಈ ವಿಶೇಷ ಕಲಾಕೃತಿ ತಯಾರಿಸಿದ್ದಾರೆ.
ಸಾವಿನ ನಂತರ ಎಲ್ಲರನ್ನೂ ಅತಿಯಾಗಿ ಕಾಡುತ್ತಿರುವ ಪುನೀತ್ ರಾಜ್ ಕುಮಾರ್ ಅವರ ಮುಗ್ಧ ನಗು ಈ ಕಲಾಕೃತಿಯಲ್ಲಿ ಕಣ್ಮನ ಸೆಳೆಯುತ್ತದೆ. ಈ ಸುಂದರ ಚಿತ್ರಕ್ಕೆ ಎಲ್ಲೆಡೆಯಿಂದ ವ್ಯಾಪಕ ಪ್ರಶಂಸೆಯೂ ವ್ಯಕ್ತವಾಗುತ್ತಿದೆ.
Kshetra Samachara
06/11/2021 04:16 pm