ಮುಲ್ಕಿ: ಮುಲ್ಕಿ ಸಮೀಪದ ಕಿಲ್ಪಾಡಿ ಗ್ರಾಮ ಪಂಚಾಯತ್ ನಿಂದ ಪುಸ್ತಕಗಳ ಮಹತ್ವ ಸಾರಲು "ಓದೆಂಬ ಬೆಳಕು" ಕಾರ್ಯಕ್ರಮ ದಡಿ ಬಸ್ ನಿಲ್ದಾಣ ಹಾಗೂ ಸಾರ್ವಜನಿಕರು ಸೇರುವ ಸ್ಥಳಗಳಲ್ಲಿ "ಪುಸ್ತಕ ಗೂಡು" ಅಳವಡಿಸುವ ಮೂಲಕ ಓದುಗರಿಗೆ ಪುಸ್ತಕಗಳು ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಳ್ಳುವ ಪ್ರಯುಕ್ತ ಕುಬೆವೂರು ರೈಲ್ವೆ ನಿಲ್ದಾಣ ಹೋಗುವ ರಸ್ತೆ ಬಳಿಯ ರಿಕ್ಷಾ ಪಾರ್ಕ್ ಬಳಿಯ ಬಸ್ ನಿಲ್ದಾಣ ದಲ್ಲಿ "ಪುಸ್ತಕಗೂಡಿನ" ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಕಿಲ್ಪಾಡಿ ಗ್ರಾಪಂ ಅಧ್ಯಕ್ಷೆ ಲೀಲಾವತಿ ಪುಸ್ತಕದ ಗೂಡನ್ನು ಉದ್ಘಾಟಿಸಿದರು.ಈ ಸಂದರ್ಭ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಪುಸ್ತಕಗಳನ್ನು ಓದುವುದರಿಂದ ಜೀವನವನ್ನು ರೂಪಿಸಿಕೊಳ್ಳಬಹುದು ಎಂದರು. ಪಂಚಾಯಿತಿ ವ್ಯಾಪ್ತಿಯ ಕುಬೆವೂರು ಹಾಗೂ ಕೆಂಪುಗುಡ್ಡೆ ಬಸ್ಸು ತಂಗುದಾಣದಲ್ಲಿ ಪುಸ್ತಕದ ಗೂಡು ಅಳವಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಗೋಪಿನಾಥ ಪಡಂಗ ಮಾತನಾಡಿ, ಪಂಚಾಯತ್ ವ್ಯಾಪ್ತಿಯ ಗ್ರಾಮಸ್ಥರು ಸೌಕರ್ಯಗಳನ್ನು ಸದುಪಯೋಗ ಪಡಿಸುವುದರ ಮೂಲಕ ಪುಸ್ತಕಗಳನ್ನು ಓದಿ ಜ್ಞಾನಾರ್ಜನೆಯ ಮೂಲಕ ಅಭಿವೃದ್ಧಿಗೆ ಸಹಕರಿಸಲು ಮನವಿ ಮಾಡಿದರು.
ಈ ಸಂದರ್ಭ ದಾನಿಗಳಾದ ಜಯಲಕ್ಷ್ಮಿ, ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಶಿವರಾಮ್ ಜಿ. ಅಮೀನ್,ಕಿಲ್ಪಾಡಿ ಗ್ರಾಪಂ ಸದಸ್ಯರಾದ ವಿಕಾಸ್ ಶೆಟ್ಟಿ, ಮಮತಾ ಶೆಟ್ಟಿ, ರಾಜೇಶ್, ಮಾಜಿ ತಾಪಂ ಸದಸ್ಯ ಶರತ್ ಕುಬೆವೂರು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
01/11/2021 04:46 pm