ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳದಲ್ಲಿ ವೈಭವದ ರಾಜ್ಯೋತ್ಸವ:ಕಳೆಗಟ್ಟಿದ ಮೆರವಣಿಗೆ

ಕಾರ್ಕಳ: ಕಾರ್ಕಳದ ಗಾಂಧಿ ಮೈದಾನದಲ್ಲಿ ೬೬ನೇ ಕನ್ನಡ ರಾಜ್ಯೋತ್ಸವ ಆಚರಣೆ ವೈಭವದಿಂದ ನಡೆಯಿತು.

ಕಾರ್ಕಳ ತಹಸೀಲ್ದಾರ್ ಕೆ.ಪುರಂದರ್ ರಾಜ್ಯೋತ್ಸವ ಧ್ವಜಾರೋಹಣ ಮಾಡಿದರು.ಇದಕ್ಕೂ ಮುನ್ನ ಕಾರ್ಕಳ ಅನಂತಶಯನ ವೃತ್ತದಲ್ಲಿ ಕನ್ನಡ ಭುವನೇಶ್ವರಿಯ ಭಾವಚಿತ್ರಕ್ಕೆ ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಪುರಸಭೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಅವರು ಆರತಿ

ಬೆಳಗಿಸಿ, ಪುಷ್ಪಾರ್ಚನೆ ಸಲ್ಲಿಸಿ, ರಾಜ್ಯೋತ್ಸವ ಜಾಥಕ್ಕೆ ಚಾಲನೆ ನೀಡಿದರು.ಕಾರ್ಕಳ ನಗರದ ಅನಂತ ಶಯನದಿಂದ ರಾಜಮಾರ್ಗದಲ್ಲಿ ಕಾರ್ಕಳ ಬಸ್ ನಿಲ್ದಾಣ, ಮೂರು ಮಾರ್ಗ, ರಥಬೀದಿ ಮುಖಾಂತರ ಗಾಂಧಿ ಮೈದಾನಕ್ಕೆ ಸಾಗಿದ ಮೆರವಣಿಗೆ ಯಲ್ಲಿ ಕನ್ನಡ

ಭುವನೇಶ್ವರಿ ರಥ, ಕಾರ್ಕಳ ಪುರಸಭೆ, ಕಂದಾಯ ಇಲಾಖೆ, ತೋಟಗಾರಿಕಾ ಇಲಾಖೆ ಮತ್ತು ವಿವಿಧ

ಕಾಲೇಜು ವಿದ್ಯಾರ್ಥಿಗಳ ವೈವಿಧ್ಯಮಯ ಕನ್ನಡ ನಾಡು ನುಡಿಯ ಸಂದೇಶ ಸಾರುವ ಟ್ಯಾಬ್ಲೋಗಳು ಮನ

ಸೂರೆಗೊಂಡವು. ವಿವಿಧ ಶಾಲಾ ವಿದ್ಯಾರ್ಥಿಗಳ ಚೆಂಡೆ ಕಲಾ ತಂಡ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

ರಾಜ್ಯ ಗೇರು ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ರತ್ನಾಕರ್

ಅಮೀನ್, ಕಾರ್ಕಳ ಪೊಲೀಸ್ ಉಪಾಧೀಕ್ಷಕ ಎಸ್.ವಿಜಯ ಪ್ರಸಾದ್, ಕಾರ್ಕಳ ವೃತ್ತ ನಿರೀಕ್ಷಕ ಸಂಪತ್ ಕುಮಾರ್, ಕಾರ್ಕಳ ಗ್ರಾಮಾಂತರ ಪಿಎಸ್‌ಐ ತೇಜಸ್ವಿ, ಹೆಬ್ರಿ ಪಿಎಸ್‌ಐ ಮಹೇಶ್, ಪುರಸಭಾ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಸ್ಧಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಿನಾರಾಯಣ

ಮಲ್ಯ ಪುರಸಭಾ ವಿಪಕ್ಷ ನಾಯಕ ಅಶ್ಪಾಕ್ ಅಹ್ಮದ್, ಪುರಸಭಾ ಸದಸ್ಯರಾದ ಶುಭದ ರಾವ್,

ಯೋಗಿಶ್ ದೇವಾಡಿಗ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

01/11/2021 03:02 pm

Cinque Terre

9.73 K

Cinque Terre

0

ಸಂಬಂಧಿತ ಸುದ್ದಿ