ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: "ಗಾಂಧೀಜಿಯವರ ಬದುಕು ಇಂದಿನ ಯುವಜನಾಂಗಕ್ಕೆ ಮಾದರಿಯಾಗಬೇಕು"

ಮುಲ್ಕಿ: ಮಂಗಳೂರು ವಿಶ್ವವಿದ್ಯಾಲಯ ,ನೆಹರು ಚಿಂತನ ಕೇಂದ್ರ,ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜು ಸಹಯೋಗದೊಂದಿಗೆ "ಗಾಂಧಿ ಚಿಂತನೆ" ಸಮಕಾಲೀನ ಜಿಜ್ಞಾಸೆ ಕಾರ್ಯಕ್ರಮ ಮುಲ್ಕಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಾಮನ ಶ್ಯಾಮ ರಾಯಪ್ಪ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪಿಎಸ್ ಎಡಪಡಿತ್ತಾಯ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ಗಾಂಧೀಜಿಯವರು ಭಾರತದ ಸ್ವಾತಂತ್ರ ಸಂಗ್ರಾಮದ ಮಹಾನ್ ನಾಯಕನಾಗಿ ಹೊರಹೊಮ್ಮಿದ್ದರು. ರಾಜಕೀಯ, ತಂತ್ರಜ್ಞಾನ ನಿರಂತರವಾದ ಜಿಜ್ಞಾಸೆಯಿಂದ ಕೂಡಿದ ಗಾಂಧೀಜಿಯವರ ಬದುಕು ಇಂದಿನ ಯುವಜನಾಂಗಕ್ಕೆ ಮಾದರಿಯಾಗಬೇಕು ಎಂದರು.

ವೇದಿಕೆಯಲ್ಲಿ ಗಾಂಧೀಜಿಯವರ ಸತ್ಯದ ಪರಿಕಲ್ಪನೆ ಮತ್ತು ಸತ್ಯಾಗ್ರಹದ ರಾಜಕಾರಣ ಬಗ್ಗೆ ಪ್ರೊ. ವರದೇಶ್ ಹಿರೇಗಂಗೆ, ಗಾಂಧೀಜಿಯವರ ಸ್ವ ಮತ್ತು ಸ್ವರಾಜ್ಯ ಬಗ್ಗೆ ಡಾ. ಮೋಹಮ್ಮದ್ ಮುಸ್ತಾಫ್, ಗಾಂಧಿ ವಿಮರ್ಶೆ ಬಗ್ಗೆ ಪ್ರಶಾಂತ ನೀಲಾವರ್ ವಿಷಯ ಮಂಡಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಕಿಶೋರ್ ಕುಮಾರ್ ಸಿ ಕೆ, ಪ್ರಚಾರ ನಿರ್ದೇಶಕ ಪ್ರೊ. ರಾಜಾರಾಮ್ ತೋಳ್ಪಾಡಿ, ಉದ್ಯಮಿ ಎಂ ಬಿ ಖಾನ್ ಕಾರ್ನಾಡ್, ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ವಾಸುದೇವ ಬೆಳ್ಳೆ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಟಿ ನಾಯಕ್, ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗಾಂಧೀಜಿ ಬಗ್ಗೆ ವಿಷಯ ಮಂಡನೆ ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ವಿಜೇತರಾದ ನಿಖಿಲ್ (ಪ್ರ) ಅವಿನಾಶ್ (ದ್ವಿ) ಪುನೀತ್ (ತೃ) ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಉಪನ್ಯಾಸಕಿ ಡಾ. ರೇಖಾ ನಿರೂಪಿಸಿದರು

Edited By : PublicNext Desk
Kshetra Samachara

Kshetra Samachara

29/10/2021 02:15 pm

Cinque Terre

5.59 K

Cinque Terre

0