ಉಡುಪಿ: ರಾಜ್ಯೋತ್ಸವ ಪ್ರಯುಕ್ತ ರಾಜ್ಯಾದ್ಯಂತ ಇಂದು ಹನ್ನೊಂದು ಗಂಟೆಗೆ ಸಮೂಹ ಗಾಯನ ನಢಯುತ್ತಿದೆ.ಈ ಹಿನ್ನೆಲೆಯಲ್ಲಿ ಕೃಷ್ಣಮಠದ ರಾಜಾಂಗಣದಲ್ಲೂ ಸಮೂಹ ಗಾಯನ ನಡೆಯಿತು.ನಗರದ ವಿವಿಧ ಕಾಲೇಜುಗಳ
ನೂರಾರು ವಿದ್ಯಾರ್ಥಿಗಳು ಸಮೂಹ ಗಾಯನದಲ್ಲಿ ಪಾಲ್ಗೊಂಡರು.
ನಾಡಗೀತೆಯೊಂದಿಗೆ ಗಾಯನ ಆರಂಭಗೊಂಡು ಬಳಿಕ ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು ,ನಿತ್ಯೋತ್ಸವ ತಾಯೆ ನಿತ್ಯೋತ್ಸವ ಹಾಡು ಕೃಷ್ಣಮಠದ ರಾಜಾಂಗಣದಲ್ಲಿ ಅನುರಣಿಸಿದವು.ಬಳಿಕ ಬಾರಿಸು ಕನ್ನಡ ಡಿಂಡಿಮ ಹಾಡನ್ನು ಸುಶ್ರಾವ್ತವಾಗಿ ಹಾಡಲಾಯಿತು.
ನೂರಾರು ವಿದ್ಯಾರ್ಥಿಗಳಿಂದ ಏಕ ಧ್ವನಿಯಲ್ಲಿ ಕನ್ನಡ ಗೀತೆಗಳು ಹೊಸ ಲೋಕವೊಂದಕ್ಕೆ ಕರೆದೊಯ್ದಂತಿತ್ತು.
Kshetra Samachara
28/10/2021 05:31 pm