ಮೂಡುಬಿದಿರೆ: ಕರ್ನಾಟಕ ರಾಜ್ಯ ರೈತ ಸಂಘ, ಮೂಡುಬಿದಿರೆ ತಾಲೂಕು ಸಂಚಲನ ಸಮಿತಿ ಆಶ್ರಯದಲ್ಲಿ ತಾಲೂಕಿನ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ಸಮಾವೇಶ ಹಾಗೂ ತಾಲೂಕು ಘಟಕ ಪುನರ್ ರಚನೆ ಸಭೆಯು ಅಕ್ಟೋಬರ್ 30ರಂದು ಸಮಾಜಮಂದಿರದಲ್ಲಿ ಬೆಳಗ್ಗೆ 10ಗಂಟೆಯಿಂದ ನಡೆಯಲಿದೆ ಎಂದು ಸಂಚಲನ ಸಮಿತಿಯ ಅಧ್ಯಕ್ಷ ಲಿಯೋ ವಾಲ್ಟರ್ ನಜ್ರತ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜಾಧ್ಯಕ್ಷ ಬಡಗಲಪುರ ನಾಗೇಂದ್ರ ಸಮಾವೇಶವನ್ನು ಉದ್ಘಾಟಿಸಲಿದ್ದು, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್ ಪುಣಚ, ಜಿಲ್ಲಾಧ್ಯಕ್ಷ ಓಸ್ಪಾಲ್ ಪ್ರಕಾಶ್ ಫೆರ್ನಾಂಡಿಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪ್ರೇಮನಾಥ ಶೆಟ್ಟಿ ಬಾಳ್ತಿಲ, ಕರ್ನಾಟಕ ರಾಜ್ಯ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಯಾದವ ಶೆಟ್ಟಿ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.
ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಆಲ್ವಿನ್ ಮಿನೇಜಸ್ ಮಾತನಾಡಿ, ಮೂಡುಬಿದಿರೆ ತಾಲೂಕಿನಲ್ಲಿ ರೈತರಿಗೆ ಆಗುತ್ತಿರುವ ಪ್ರಮುಖ ಸಮಸ್ಯೆಗಳ ಬಗ್ಗೆ ಸಮಾವೇಶದಲ್ಲಿ ಸಮಾಲೋಚನೆ ನಡೆಯಲಿದೆ. ಮುಖ್ಯವಾಗಿ ರಾಷ್ಟಿçÃಯ ಹೆದ್ದಾರಿಯಲ್ಲಿ ಭೂಮಿ ಕಳೆದುಕೊಂಡವರಿಗೆ ಪರಿಹಾರದಲ್ಲಿ ಆಗುತ್ತಿರುವ ತಾರತಮ್ಯ, ಪ್ರಾಂತ್ಯ ಗ್ರಾಮದ ಪೇಪರ್‌ಮಿಲ್ಲ್ ಪ್ರದೇಶವನ್ನು ಕೈಗಾರಿಕಾ ವಲಯವೆಂದು ಘೋಷಿಸದಂತೆ ಒತ್ತಾಯ, ಒಳಚರಂಡಿ ಅವ್ಯವಸ್ಥೆಯಿಂದ ರೈತರಿಗೆ ಆಗುತ್ತಿರುವ ತೊಂದರೆ ಸಹಿತ ಹಲವು ವಿಚಾರಗಳ ಹೋರಾಟಕ್ಕೆ ರೂಪುರೇಷೆಯ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.
ಸAಚಲನ ಸಮಿತಿಯ ಕಾರ್ಯದರ್ಶಿ ರಿಚಾರ್ಡ್ ಕರ್ಡೋಜಾ, ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರೋನಿ ಮಂಡೋನ್ಸಾ, ಸಂಚಲನ ಸಮಿತಿ ಸದಸ್ಯರಾದ ಎ.ಎಲ್ ವಾಸ್, ಬ್ರಿಜೇಶ್ ಶೆಟ್ಟಿ, ಫಿಲಿಪ್ ಡಿಸಿಲ್ವ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Kshetra Samachara
27/10/2021 06:21 pm