ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಕ್ಷಿಕೆರೆ: ಸ್ವಚ್ಛ ಭಾರತ 2021-22ರ ಅಭಿಯಾನ

ಮುಲ್ಕಿ: ಮುಲ್ಕಿ ಸಮೀಪದ ಪಕ್ಷಿಕೆರೆ ಶ್ರೀ ವಿನಾಯಕ ಮಿತ್ರ ಮಂಡಳಿ ನೇತೃತ್ವದಲ್ಲಿ ನೆಹರು ಯುವ ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ ಮಂಗಳೂರು, ಜಿಲ್ಲಾ ಡಳಿತ ದಕ್ಷಿಣ ಕನ್ನಡ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮತ್ತು ಕೆಮ್ರಾಲ್ ಗ್ರಾಮ ಪಂಚಾಯತ್‌ನ ಸಂಯುಕ್ತ ಆಶ್ರಯದಲ್ಲಿ ಅಜಾದಿ ಕ ಅಮೃತ್ ಮಹೋತ್ಸವ್ ಸ್ವಚ್ಛ ಭಾರತ 2021-22ರ ಅಭಿಯಾನದ ಅಂಗವಾಗಿ ಪಕ್ಷಿಕೆರೆಯ ಹೊಸಕಾಡಿನ ಕೆರೆ ಸ್ವಚ್ಛತೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾ ಕೃಷ್ಣಪ್ಪ, ಮಂಡಳಿಯ ಗೌರವಧ್ಯಕ್ಷ ಧನಂಜಯ ಪಿ ಶೆಟ್ಟಿಗಾರ್, ಮಂಡಳಿಯ ಅಧ್ಯಕ್ಷ ಚಂದ್ರಹಾಸ್ ಕುಂದರ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಹಾಗೂ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

24/10/2021 02:37 pm

Cinque Terre

3.3 K

Cinque Terre

0

ಸಂಬಂಧಿತ ಸುದ್ದಿ