ಮಲ್ಪೆ: ರಜತೋತ್ಸವವನ್ನು ಆಚರಿಸುತ್ತಿರುವ ಕೊಡವೂರು ಬ್ರಾಹ್ಮಣ ಮಹಾಸಭಾ ವತಿಯಿಂದ " ರಜತ ಪಥದಲ್ಲಿ ವಿಪ್ರ ಹೆಜ್ಜೆ" ಎಂಬ ಸರಣಿ ಕಾರ್ಯಕ್ರಮದಲ್ಲಿ 25 ನೇ ಕಾರ್ಯಕ್ರಮವಾಗಿ ಸಾಮೂಹಿಕ ದುರ್ಗಾನಮಸ್ಕಾರ ಪೂಜೆ ವೇದಮೂರ್ತಿ ಕಂಬಳಕಟ್ಟ ಶ್ರೀ ರಾಧಾಕೃಷ್ಣ ಉಪಾಧ್ಯರ ನೇತ್ರತ್ವದಲ್ಲಿ ನಡೆಯಿತು. ಹಾಗೂ ಸಮಿತಿಯ ಧಾರ್ಮಿಕ ಕಾರ್ಯದರ್ಶಿ ಶ್ರೀ ಲಕ್ಷ್ಮೀ ನಾರಾಯಣ ಭಟ್ ರವರ ಸಂಯೋಜನೆಯಲ್ಲಿ ಕೊಡವೂರಿನ "ವಿಪ್ರಶ್ರೀ" ಸಾಂಸ್ಕ್ರತಿಕ ಕಲಾಭವನದಲ್ಲಿ ಶ್ರೀ ಲಕ್ಷ್ಮೀ ಶೋಭಾನೆ ಹಾಗೂ ಭಜನೆಗಳೊಂದಿಗೆ ಬಹು ವಿಜೃಂಭಣೆಯಿಂದ ಹುಣ್ಣಿಮೆಯ ಪರ್ವ ಕಾಲದಲ್ಲಿ ಆಚರಿಸಲಾಯಿತು.
ಶ್ರೀ ಭಾಸ್ಕರ ಆಚಾರ್ಯ, ಬೆಂಗಳೂರು ಇವರ ಮುಖ್ಯ ಪೂಜಾ ಸೇವೆಯೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಸಮಾಜದ ಸುಮಾರು 125 ಜನ ಮಹಿಳೆಯರು ಹಾಗೂ ಮಹನೀಯರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಶ್ರೀ ನಾರಾಯಣ ಬಲ್ಲಾಳ್, ಕೊಡವೂರು ಬ್ರಾಹ್ಮಣ ಮಹಾಸಭಾದ ಕಾರ್ಯಾಧ್ಯಕ್ಷ ಮಂಜುನಾಥ ಭಟ್ ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
21/10/2021 02:02 pm