ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಾವಂಜೆ: 'ಚರಿತ್ರೆಯೊಳಗೆ ಬತ್ತದ ಚಿತ್ತ' ವಿಶಿಷ್ಟ ರೀತಿಯ ಕಾರ್ಯಕ್ರಮ

ಮುಲ್ಕಿ: ಹಳೆಯಂಗಡಿ ಸಮೀಪದ ಪಾವಂಜೆಯ ನಿನಾದ ರಂಗಮಂದಿರದಲ್ಲಿ ಮಂಗಳೂರು ವಿ.ವಿ.ರಾಣಿ ಅಬ್ಬಕ್ಕ ಅಧ್ಯಯನ ಪೀಠ. ಸುರತ್ಕಲ್ ಗೋವಿಂದದಾಸ ಕಾಲೇಜು ಎನ್‌ಎಸ್‌ಎಸ್ ಯೋಜನೆಗಳ ಸಹಯೋಗದಲ್ಲಿ "ಚರಿತ್ರೆಯೊಳಗಿನ ಬತ್ತದ ಚಿತ್ತ" ಕಾರ್ಯಕ್ರಮ ವಿಶಿಷ್ಟ ರೀತಿಯಲ್ಲಿ ನಡೆಯಿತು.

ಹಳೆಯಂಗಡಿ ಪ್ರಿಯದರ್ಶಿನಿ ಸಹಕಾರಿ ಸಂಘದ ಪ್ರತಿಭಾ ಕುಳಾಯಿ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಪೂರ್ವಜರ ಬದುಕಿನ ತಿಳುವಳಿಕೆ ನೀಡುವ ಕೆಲಸ ಆಗಬೇಕು. ಯುವ ಜನಾಂಗದಿಂದ ರಾಷ್ಟ್ರೀಯ ಸೇವಾ ಯೋಜನೆ ಮೂಲಕ ರಾಷ್ಟ್ರ ನಿರ್ಮಾಣ ಸಾಧ್ಯ. ಕೃಷಿ-ಬದುಕು ಬಗ್ಗೆ ಮಾಹಿತಿ ನೀಡುವ ಕಾರ್ಯ ಶ್ಲಾಘನೀಯ ಎಂದರು.

ಕಾವೂರು ಕಾಲೇಜಿನ ಉಪನ್ಯಾಸಕ ಸಚೇತ್ ಸುವರ್ಣ ಮಾತನಾಡಿ, ಉಳ್ಳಾಲದ ಅಬ್ಬಕ್ಕ ರಾಣಿ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ಆಡಳಿತ, ದಿಟ್ಟತನ ಸಾಹಸ ತುಳುನಾಡಿನ ಸಂಸ್ಕೃತಿಕ ಪ್ರತೀಕವಾಗಿ ಸದಾ ಸ್ಮರಣೀಯಳು ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕ ಓಸ್ವಾಲ್ಡ್ ಪಾಯಸ್ ಅವರನ್ನು ಗೌರವಿಸಲಾಯಿತು. ಕೃಷಿ ಅಧಿಕಾರಿ ಅಬ್ದುಲ್ ಬಶೀರ್ ಭತ್ತದ ಕೃಷಿ ಬಗ್ಗೆ ಉಪನ್ಯಾಸ ನೀಡಿದರು. ನಿನಾದ ಟ್ರಸ್ಟ್‌ನ ಕಡಂಬೋಡಿ ಮಹಾಬಲ ಪೂಜಾರಿ, ಕುಸುಮಾ ಪೂಜಾರಿ, ಕಾರ್ಪೋರೇಟರ್ ವರುಣ್ ಚೌಟ್, ಗೋವಿಂದದಾಸ ಕಾಲೇಜಿನ ಪ್ರಾಚಾರ್ಯ ಕೃಷ್ಣ ಮೂರ್ತಿ ಇದ್ದರು.

Edited By : PublicNext Desk
Kshetra Samachara

Kshetra Samachara

17/10/2021 05:51 pm

Cinque Terre

3.49 K

Cinque Terre

0