ಮುಲ್ಕಿ:ಮುಲ್ಕಿ ಸಮೀಪದ ಕೊಲಕಾಡಿ ಜೈ ಜಗದಂಬಾ ಯಕ್ಷಗಾನ ಕಲಾ ಮಂಡಳಿಯ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಶನಿವಾರ ಕೊಲಕಾಡಿ ಶ್ರೀ ಕಾಳಿಕಾಂಬಾ ದೇವಸ್ತಾನದ ಮುಂಭಾಗದಲ್ಲಿನ ಕೀರ್ತಿಶೇಷ ಪಂಜಿನಡ್ಕ ಗಂಗಾಧರ ಆಚಾರ್ಯ ಸಭಾ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಕೆ ಜಿ ಐ ಸಿ ಎಸ್ ಬ್ಯಾಂಕಿನ ನಿವೃತ್ತ ಪ್ರಧಾನ ವ್ಯವಸ್ತಾಪಕ ಕೆ ಉಮೇಶ್ ಆಚಾರ್ಯ ವಹಿಸಿ ಮಾತನಾಡಿ ಯಕ್ಷಗಾನದ ಮೂಲಕ ಕಲೆಗೆ ಪ್ರೋತ್ಸಾಹ ನೀಡುತ್ತಿರುವ ಸಂಘಟನೆಯ ಕಾರ್ಯ ಶ್ಲಾಘನೀಯವಾಗಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಸಾಧಕರನ್ನು ಗೌರವಿಸಿ ಸಂಘಟನೆ ರಾಷ್ಟ್ರಕ್ಕೆ ಮಾದರಿಯಾಗಲಿ ಎಂದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಅತಿಕಾರಿಬೆಟ್ಟು ಗ್ರಾ. ಪಂ ಅಧ್ಯಕ್ಷ ಮನೋಹರ್ ಕೋಟ್ಯಾನ್, ಕೃಷಿಕ ರಾಮದಾಸ್ ಶೆಟ್ಟಿ ಬಾಳಿಕೆ ಮನೆ ಪುತ್ತೂರು, ದೇವಸ್ಥಾನದ ಆಡಳಿತ ಮೊಕ್ತೇಸರ ಕೆ ಸುಧಾಕರ ಆಚಾರ್ಯ ಕೊಲಕಾಡಿ, ಕೂಡುವಳಿಕೆ ಮೊಕ್ತೇಸರ ಸದಾಶಿವ ಆಚಾರ್ಯ, ಪ್ರೇಮ ಸುಧಾಕರ ಆಚಾರ್ಯ, ಕೊಲಕಾಡಿ ಜೈ ಜಗದಂಬಾ ಯಕ್ಷಗಾನ ಕಲಾ ಮಂಡಳಿಯ ಪ್ರಶಾಂತ್ ಆಚಾರ್ಯ , ಯುವಕ ವೃಂದದ ಅಧ್ಯಕ್ಷ ಶರತ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭಾಗವತ ಚಂದ್ರಕಾಂತ ಆರ್ ಶೆಟ್ಟಿ ಪಂಜಿನಡ್ಕರವರನ್ನು ಗೌರವಿಸಲಾಯಿತು.ಬಳಿಕ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ "ಶಿವಭಕ್ತ ವೀರಮಣಿ"ಯಕ್ಷಗಾನ ತಾಳ ಮದ್ದಳೆ ಪ್ರಸಂಗ ನಡೆಯಿತು.
Kshetra Samachara
16/10/2021 08:22 pm