ಉಡುಪಿ: ಉಡುಪಿಯಲ್ಲಿ ನಿನ್ನೆ ಸಂಜೆ ನಡೆದಿದ್ದ ದುರ್ಗಾ ದೌಡ್ ಕಾರ್ಯಕ್ರಮದಲ್ಲಿ ಹಿಂದು ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತ್ ಬೆಂಕಿ ಭಾಷಣ ಮಾಡಿದ್ದಾರೆ.ನಗರದ ಅಂಬಲಪಾಡಿ ಮೈದಾನದಲ್ಲಿ ಸಮಾರೋಪ ಭಾಷಣದಲ್ಲಿ ಕಾರಂತ್ ದೇಶದ ಸಾಮಾಜಿಕ ಸ್ವಾಸ್ಥ್ಯ ಕದಡುವ ಮಾತಾಡಿದ್ದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಜಗದೀಶ್ ಕಾರಂತ್ ಬೆಂಕಿ ಭಾಷಣದ ಕೆಲವು ಸಾಲುಗಳು ಹೀಗಿವೆ:
ದೇಶದಲ್ಲಿ ಸೆಕ್ಯೂಲರಿಸಂ, ಸಮಾಜವಾದ ಸಮಾಧಿಯಾಗಿದೆ!ಜನ ಜಾತ್ಯತೀತತೆಯನ್ನು ಸಂಪೂರ್ಣ ತಿರಸ್ಕಾರ ಮಾಡಿದ್ದಾರೆ.ಬುದ್ಧಿಜೀವಿಗಳು ಪ್ರಗತಿಪರರ ಹೆಸರಲ್ಲಿ ಕಾಲೇಜ್ ಗಳ ಒಳಗೆ ಬದುಕುತಿದ್ದಾರೆ.ಇನ್ನು ಮುಂದೆ ದೇಶದಲ್ಲಿ, ರಾಜ್ಯದಲ್ಲಿ ಎಲ್ಲಾ ಆಟಾಟೊಪಗಳು ನಿಲ್ಲುತ್ತವೆ ಎಂದು ಜಗದೀಶ್ ಕಾರಂತ್ ಹೇಳಿದ್ದಾರೆ.
ಮುಂದುವರಿದು ಮಾತನಾಡಿದ ಅವರು ಕಡಲತಡಿ ಕಬಳಿಸುವ ಯುದ್ಧ ಲ್ಯಾಂಡ್ ಜಿಹಾದ್ ನಡೆಯುತ್ತಿದೆ.ಹಿಂದೂ ಘೋಷಣೆ ಆಗದೆ ಆಚರಣೆ ಆಗಬೇಕು.ಧರ್ಮದ ರಕ್ಷಣೆಗೆ ಸಮಾಜ ಮೈಕೊಡವಿ ಎದ್ದು ನಿಲ್ಲಬೇಕು.ಭಾರತವನ್ನು ತಾಲಿಬಾನ್ ಮಾಡುವ ಕನಸು ಕಾಣುತ್ತಿದ್ದಾರೆ.ಕರಾವಳಿಯಲ್ಲಿ ತಾಲಿಬಾನ್ ರಿಕ್ರೂಟ್ಮೆಂಟ್ ಮಾಡಲಾಗುತ್ತಿದೆ. ಐಸಿಸ್ ಕೊಂಡಿ ಉಳ್ಳಾಲದಲ್ಲಿದೆ.ಹಿಂಜಾವೇ ಇದ್ದಲ್ಲಿ ತಾಲಿಬಾನಿಗಳ ಆಟ ಆಡಿಯೋದಿಲ್ಲ.ವಿಶ್ವದ ಶತ್ರುಗಳ ಟಾರ್ಗೆಟ್ ಭಾರತ ದೇಶ.ಭಾರತವನ್ನು ಒಳಗೊಳಗೆ ಕೊಲ್ಲಲಾಗುತ್ತಿದೆ.ರೈತರ ಹೆಸರನ್ನು ಬಳಸಿ ಶತ್ರುಗಳ ಷಡ್ಯಂತ್ರದ ಪರಾಕಾಷ್ಠೆ ನಡೆಯುತ್ತಿದೆ ಎಂದು ಹಿಂಜಾವೇ ಮುಖಂಡ ಉಗ್ರ ಭಾಷಣ ಮಾಡಿದ್ದಾರೆ.
Kshetra Samachara
16/10/2021 09:36 am