ಮುಲ್ಕಿ: ಕರ್ನಾಟಕ ಸರಕಾರ ದಕ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸಹಯೋಗದಲ್ಲಿ ಕಿಲ್ಪಾಡಿ ಪಂಚಾಯತ್ ವತಿಯಿಂದ ಕಿಲ್ಪಾಡಿ ಮಹರ್ಷಿ ಶಾಲೆ ಯಲ್ಲಿ "ಓದೆಂಬ ಬೆಳಕು" ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಶಾಲಾ ಪುಟ್ಟ ಮಕ್ಕಳು ಮೊಂಬತ್ತಿಯ ಮೂಲಕ ದೀಪ ಪ್ರಜ್ವಲನ ಗೊಳಿಸಿ ಉದ್ಘಾಟಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಿಲ್ಪಾಡಿ ಗ್ರಾಪಂ ಅಧ್ಯಕ್ಷೆ ಲೀಲಾವತಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪತ್ರಕರ್ತ ಪರಮಾನಂದ ಸಾಲ್ಯಾನ್ ಮಾತನಾಡಿ ಕಿಲ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಜೊತೆಗೆ "ಓದೆಂಬ ಬೆಳಕು"ಎಂಬ ವಿಶಿಷ್ಟ ರೀತಿಯ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ಒತ್ತು ನೀಡುತ್ತಿರುವ ಪಂಚಾಯತ್ ಕಾರ್ಯ ಶ್ಲಾಘನೀಯ, ಪುಸ್ತಕಗಳ ಮಹತ್ವ ಅರಿತುಕೊಂಡು ಜ್ಞಾನಾರ್ಜನೆಯ ಮೂಲಕ ಜೀವನದಲ್ಲಿ ಅದ್ಭುತ ಸಾಧನೆ ಮಾಡಿ ಮಕ್ಕಳು ರಾಷ್ಟ್ರಕ್ಕೆ ಮಾದರಿಯಾಗಬೇಕು ಎಂದರು.
ಮುಲ್ಕಿ ಶ್ರೀನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆಯ ಕನ್ನಡ ಶಿಕ್ಷಕ ಕೇಶವ ಮಾತನಾಡಿ ವಿವಿಧ ರೀತಿಯ ಅಭಿರುಚಿಯೊಂದಿಗೆ ಮಕ್ಕಳು ವಿದ್ಯಾಭ್ಯಾಸದ ಮೂಲಕ ಸಮಾಜಕ್ಕೆ ಒಳಿತು ಮಾಡುವ ತತ್ವ-ಸಿದ್ಧಾಂತಗಳ ಬಗ್ಗೆ ಗಮನ ಕೊಡಬೇಕಾಗಿದೆ ಎಂದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಮಾತನಾಡಿ ಮಕ್ಕಳು ಮೊಬೈಲ್ ಜಗತ್ತನ್ನು ಬಿಟ್ಟು ಓದಿನ ಬಗ್ಗೆ ಗಮನಹರಿಸಿದರೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಾಧ್ಯ, ಪಂಚಾಯತ್ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಓದು ಮತ್ತು ವಿಮರ್ಶೆ ಎಂಬ ಸ್ಪರ್ಧೆ ಏರ್ಪಡಿಸಲಾಗಿದ್ದು, ನ. 14 ಮಕ್ಕಳ ದಿನಾಚರಣೆಯಂದು ಬಹುಮಾನ ವಿತರಿಸಲಾಗುವುದು ಎಂದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪಂಚಾಯತ್ ಉಪಾಧ್ಯಕ್ಷ ಗೋಪಿನಾಥ ಪಡಂಗ, ಅಂತರಾಷ್ಟ್ರೀಯ ದೇಹದಾಡ್ಯ ಪ್ರಶಸ್ತಿ ವಿಜೇತ ನಾಗೇಶ್ ಪ್ರಸಾದ್, ಸಾಹಿತಿ ಅನಿತಾ ಪಿಂಟೋ,ನಿವೃತ್ತ ಶಿಕ್ಷಕಿ ಹೇಮಲತಾ, ಪಂಚಾಯತ್ ಸದಸ್ಯರಾದ ವಿಕಾಸ್ ಶೆಟ್ಟಿ, ರಾಜೇಶ್ ಕೋಟ್ಯಾನ್,ಮಾಜೀ ಸದಸ್ಯ ಶರೀಫ್ ಕಿಲ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಗೋಪಿನಾಥ ಪಡಂಗ ಸ್ವಾಗತಿಸಿದರು, ರಮೇಶ್ ನಿರೂಪಿಸಿದರು
Kshetra Samachara
14/10/2021 11:13 am