ಕೋಟ: ಅಭಿವೃದ್ಧಿ ಯೋಜನೆ ಕೇವಲ ಕಾಮಗಾರಿಗಳಾಗದೆ, ಊರು-ಊರುಗಳ ನಡುವೆ ಸಂಪರ್ಕ, ಮನುಷ್ಯ-ಮನುಷ್ಯನ ಮಧ್ಯೆ ಮಾನವೀಯತೆ ಸಂಪರ್ಕ ಬೆಸೆಯುವ ಕೊಂಡಿಯಾಗಬೇಕು. ಇದೇ ತತ್ವ ಅಳವಡಿಸಿ ತೂಗುಸೇತುವೆ ನಿರ್ಮಾಣ ಕೈಗೆತ್ತಿಕೊಂಡೆ. ನನ್ನ ಸಾಧನೆಗೆ ಮಾತಾ-ಪಿತರು, ಸಹದ್ಯೋಗಿಗಳ ಸಹಕಾರ ಮುಖ್ಯ ಕಾರಣ ಎಂದು ತೂಗುಸೇತುವೆಗಳ ಸರದಾರ ಗಿರೀಶ್ ಭಾರಧ್ವಜ್ ತಿಳಿಸಿದರು.
ಅವರು ಇಂದು ಕೋಟ ಕಾರಂತ ಕಲಾಭವನದಲ್ಲಿ ಕೋಟತಟ್ಟು ಗ್ರಾಪಂ., ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಸಹಯೋಗದಲ್ಲಿ ಶಿವರಾಮ ಕಾರಂತ ಜನ್ಮದಿನೋತ್ಸವ ಪ್ರಯುಕ್ತ ಜರುಗಿದ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು.
ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ಪ್ರಶಸ್ತಿ ಪ್ರದಾನ ಮಾಡಿದರು.
ಕೋಟತಟ್ಟು ಗ್ರಾಪಂ ಅಧ್ಯಕ್ಷೆ ಅಶ್ವಿನಿ ದಿನೇಶ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮಕ್ಕೆ ಸಹಕರಿಸಿದ ರವೀಂದ್ರ ಐತಾಳ, ಯು.ಎಸ್.ಶೆಣೈ, ಸುರೇಶ ಕಾರ್ಕಡ ಅವರನ್ನು ಸನ್ಮಾನಿಸಲಾಯಿತು.
ಸಾಲಿಗ್ರಾಮ ಪ.ಪಂ. ಅಧ್ಯಕ್ಷೆ ಸುಲತಾ ಹೆಗ್ಡೆ, ಕೋಟ ಗ್ರಾಪಂ ಅಧ್ಯಕ್ಷ ಅಜಿತ್ ದೇವಾಡಿಗ, ನೀಲಾವರ ಸುರೇಂದ್ರ ಅಡಿಗ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಬ್ರಹ್ಮಾವರ ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ವಿ. ಇಬ್ರಾಹಿಂಪುರ್, ಕೋಟ ಕಾರಂತ ಕಲಾಭವನದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಉಪಸ್ಥಿತರಿದ್ದರು.
ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ.ಕುಂದರ್ ಸ್ವಾಗತಿಸಿದರು. ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಾಸ್ತಾವಿಕ ಮಾತನಾಡಿದರು. ಪ್ರಶಸ್ತಿ ಆಯ್ಕೆ ಸಮಿತಿ ಸಂಚಾಲಕ ಯು.ಎಸ್. ಶೆಣೈ ಪ್ರಶಸ್ತಿ ಆಯ್ಕೆ ಮಾನದಂಡದ ಕುರಿತು ತಿಳಿಸಿದರು. ಹಿರಿಯರಾದ ಶ್ರೀಧರ್ ಹಂದೆ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಸಂಜೀವ ಗುಂಡ್ಮಿ ಗೌರವ ಸ್ವೀಕರಿಸಿದವರನ್ನು ಪರಿಚಯಿಸಿ, ಸತೀಶ್ ವಡ್ಡರ್ಸೆ ನಿರೂಪಿಸಿದರು. ಪಿಡಿಒ ಶೈಲಾ ವಂದಿಸಿದರು.
Kshetra Samachara
11/10/2021 04:34 pm