ಮುಲ್ಕಿ: ಮುಲ್ಕಿಯ ಜೂನಿಯರ್ ಎಸ್ ಪಿ ಬಾಲಸುಬ್ರಹ್ಮಣ್ಯಂ ಖ್ಯಾತಿಯ ಸುವರ್ಣ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಪುರಸ್ಕೃತ ರವೀಂದ್ರ ಪ್ರಭು ರವರಿಂದ ಗಾನಗಂಧರ್ವ ದಿ. ಡಾ.ಎಸ್ ಪಿ ಬಾಲಸುಬ್ರಹ್ಮಣ್ಯಂ ನೆನಪಿಗೋಸ್ಕರ "ಗಾನ ನಮನ"ಕಾರ್ಯಕ್ರಮ ಮುಲ್ಕಿ ಸುವರ್ಣ ಸ್ಟುಡಿಯೋದಲ್ಲಿ ನಡೆಯಿತು
ಕಾರ್ಯಕ್ರಮವನ್ನು ಬಂಟ್ವಾಳ ವಾಮದಪದವು ಯಜಮಾನ ಇಂಡಸ್ಟ್ರೀಸ್ ನ ವರದರಾಜ ಪೈ, ಮುಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸುನಿಲ್ ಆಳ್ವ ದೀಪ ಬೆಳಗಿಸಿ ಚಾಲನೆ ನೀಡಿದರು.
ಈ ಸಂದರ್ಭ ವರದರಾಜ ಪೈ ಮಾತನಾಡಿ ತಮ್ಮ ಹಾಗೂ ಡಾ. ಬಾಲಸುಬ್ರಹ್ಮಣ್ಯಂ ಹಾಗೂ ನಟ ವಿಷ್ಣುವರ್ಧನ್ ಅವಿನಾಭಾವ ಸಂಬಂಧ ಗಳನ್ನು ನೆನಪಿಸಿಕೊಂಡು ಕಲೆಗೆ ಪ್ರೋತ್ಸಾಹ ನೀಡುವ ಮೂಲಕ ಯುವ ಕಲಾಕಾರರನ್ನು ಬೆಳಕಿಗೆ ತರುವ ಕೆಲಸವಾಗಬೇಕು ಎಂದರು. ಈ ಸಂದರ್ಭ ಅವರು ಡಾ. ಎಸ್ ಪಿ ಬಿ ಯವರ ನೂರೊಂದು ನೆನಪು ಎದೆಯಾಳದಿಂದ....... ಹಾಡನ್ನು ಹಾಡಿ ರಂಜಿಸಿದರು.
ಮುಲ್ಕಿ ನಪಂ ಮಾಜಿ ಅಧ್ಯಕ್ಷ ಸುನಿಲ್ ಆಳ್ವ ಮಾತನಾಡಿ ಎಸ್ ಬಾಲಸುಬ್ರಹ್ಮಣ್ಯಂ ಓರ್ವ ಅದ್ಭುತ ಹಾಡುಗಾರರಾಗಿ ಇಂದಿಗೂ ಎಂದೆಂದಿಗೂ ಜನಮಾನಸದಲ್ಲಿ ಇದ್ದಾರೆ. ಅವರ ನೆನಪು ಸದಾ ಉಳಿಯಲು ನಡೆಯುತ್ತಿರುವ ಗಾನ ನಮನ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ರವೀಂದ್ರ ಪ್ರಭುರವರು ಎಸ್ಪಿಬಿ ಬಾವ ಚಿತ್ರದ ನೂತನ ಸ್ಮರಣಿಕೆ ನೀಡಿ ಅತಿಥಿಗಳನ್ನು ಗೌರವಿಸಿದರು.
ತಾಂತ್ರಿಕ ಸಲಹೆಗಾರ ವಿನೋದ್ ಸುವರ್ಣ, ಸ್ವರ್ಣ ಸ್ಟುಡಿಯೋದ ಗಗನ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಆರ್ ಜೆ ಪ್ರಸನ್ನ ನಿರೂಪಿಸಿದರು.ಬಳಿಕ ಖ್ಯಾತ ಗಾಯಕ ರವೀಂದ್ರ ಪ್ರಭು ರವರಿಂದ ಎಸ್ ಪಿ ಬಾಲಸುಬ್ರಹ್ಮಣ್ಯಂ "ಗಾನ ನಮನ" ಕಾರ್ಯಕ್ರಮ ನಡೆಯಿತು.
Kshetra Samachara
11/10/2021 10:11 am