ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಡಾ.ಶಿವರಾಮ ಕಾರಂತರು ನಾಡಿಗೆ ಚೈತನ್ಯ ತುಂಬಿದ ಸಾಧಕರು"

ಮಂಗಳೂರು: ಕಲೆ, ಸಾಹಿತ್ಯ, ಸಂಸ್ಕೃತಿ ನೀರಸ ಬದುಕಿಗೆ ಚೈತನ್ಯ ತುಂಬುತ್ತದೆ. ಸಮಾಜದಲ್ಲಿ ಯಾರು ಕೇವಲ ತಮ್ಮ ಬದುಕಿನಲ್ಲಿ ಮಾತ್ರ ಅಲ್ಲ, ಇಡೀ ನಾಡಿಗೆ ಇಂತಹ ಚೈತನ್ಯ ತುಂಬುತ್ತಾರೋ ಅಂತವರು ಮಹಾತ್ಮರು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಶಿವರಾಮ ಕಾರಂತರು ಅದೇ ಮಾದರಿಯಲ್ಲಿ ನಮ್ಮ ನಾಡಿಗೆ ಚೈತನ್ಯ ತುಂಬಿ ಮಹತ್ತರ ಸಾಧನೆ ಮಾಡಿದ್ದಾರೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ನಗರದ ಜನತಾ ಡಿಲಕ್ಸ್ ಸಭಾಂಗಣದಲ್ಲಿ ಕಲ್ಕೂರ ಪ್ರತಿಷ್ಠಾನ ವತಿಯಿಂದ ನಡೆದ ಕಾರಂತ ಹುಟ್ಟುಹಬ್ಬ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಂದು ಡಾ.ಕಾರಂತರು ನಮ್ಮ ಕಣ್ಣ ಮುಂದೆ ಇರದಿದ್ದರೂ, ಅವರ ಸಾಧನೆ ಮಾತ್ರ ಇನ್ನೂ ಮಾಸಿಲ್ಲ. ಅಂತಹ ಸಾಧನೆ ಮಾಡಿದವರನ್ನು ನಾವಿಂದು ಅವರ ಹೆಸರಿನಲ್ಲಿ ಗುರುತಿಸುತ್ತೇವೆ. ಇಂದು ಡಾ.ಎಸ್‌.ಸಂಧ್ಯಾ ಪೈಯವರು ಅಂತಹ ಸಾಧನೆ ಮಾಡಿದ್ದು, ಹಾಗಾಗಿ ಅರ್ಹವಾಗಿ ಅವರು ಕಾರಂತ ಹುಟ್ಟುಹಬ್ಬ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಪೇಜಾವರ ಶ್ರೀ ಹೇಳಿದರು.

ಹುಟ್ಟಿದ ಪ್ರತಿ ಮನುಷ್ಯರು ಸಾವಿನ ತನಕ ಬದುಕಬೇಕೆಂದಿದ್ದಲ್ಲಿ ಏನಾದರೊಂದು ವೃತ್ತಿ ನಿರ್ವಹಿಸಿ ಸಂಪಾದನೆ ಮಾಡಬೇಕು. ಕೆಲವೊಂದು ಸಲ ಇಂತಹ ಬದುಕು‌ ನೀರಸ ಎಂದೆನಿಸಿಕೊಳ್ಳುತ್ತದೆ. ಈ ಬದುಕು ಆತ್ಮನಿಲ್ಲದ, ಚೈತನ್ಯವಿಲ್ಲದ ಬದುಕು ಹೇಗೆ ಇರುತ್ತದೋ ಹಾಗೆ ಇರುತ್ತದೆ‌ ಎಂದು ಪೇಜಾವರ ಶ್ರೀ ಹೇಳಿದರು.

Edited By :
Kshetra Samachara

Kshetra Samachara

10/10/2021 09:05 pm

Cinque Terre

19.82 K

Cinque Terre

0

ಸಂಬಂಧಿತ ಸುದ್ದಿ