ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳ ಯೋಜನೆಯಡಿ ನೋಂದಣಿ ಶಿಬಿರ

ಉಡುಪಿ: ಉಡುಪಿ ಜಿಲ್ಲಾಡಳಿತ ,ಕಾರ್ಮಿಕ‌ ಇಲಾಖೆ , ಜಿಲ್ಲಾ‌ ಕಾನೂನು ಪ್ರಾಧಿಕಾರ ಮತ್ತು ಚತುರ್ಥಿ ಮ್ಯಾನೇಜ್ ಮೆಂಟ್ ಸರ್ವಿಸ್ ,ನಾಯಕ್ ಗ್ರೂಪ್ ಸಹಯೋಗದಲ್ಲಿ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳ ಯೋಜನೆಯಡಿ ನೋಂದಣಿ ಶಿಬಿರ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಧೀಶರು, ಜಿಲ್ಲಾ‌ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾಗಿರುವ ಶ್ರೀಮತಿ ಶರ್ಮಿಳಾ‌ ಕಾರ್ಯಕ್ರಮ ಉದ್ಘಾಟಿಸಿದರು.

ಜಿಲ್ಲಾ‌ ಯೋಜನಾ ವ್ಯವಸ್ಥಾಪಕರಾದ ಅರುಣ್ ಎಸ್ ಕೆ ಅಸಂಘಟಿತ ಕಾರ್ಮಿಕರಿಗೆ ದೊರಕುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಉಡುಪಿ ಜಿಲ್ಲಾ‌ ಸಿ ಎಸ್ ಸಿ ವ್ಯವಸ್ಥಾಪಕ ನಿತೇಶ್ , ಕಾರ್ಮಿಕ‌ ನಿರೀಕ್ಷಕರಾದ ಪ್ರವೀಣ್ ,ಪ್ರಸನ್ನ ಚತುರ್ಥಿ ಮ್ಯಾನೇಜ್ ಮೆಂಟ್ ಸರ್ವಿಸ್ ನ ನಾಗರಾಜ್ ಪ್ರಭು ,ನಾಯಕ್ ಗ್ರೂಪ್ ನ ಗೋವರ್ಧನ್ ನಾಯಕ್ ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

09/10/2021 01:45 pm

Cinque Terre

4.72 K

Cinque Terre

0