ಕೂಳೂರು: ಕನ್ನಡ ನಾಡು ನುಡಿ, ಜಲ ಸಂರಕ್ಷಣೆ, ಸ್ಥಳೀಯರಿಗೆ ಉದ್ಯೋಗ ಮತ್ತಿತರ ನ್ಯಾಯಯುತ ಬೇಡಿಕೆಗೆಹೋರಾಟ ನಡೆಸುತ್ತಾ ಬರುತ್ತಿರುವ ಕನ್ನಡ ಸೇನೆ ಕರ್ನಾಟಕ ಇದರ ದಕ್ಷಿಣ ಕನ್ನಡ ಜಿಲ್ಲಾ ಕಚೇರಿ ಉದ್ಘಾಟನೆ ಸಮಾರಂಭ ಅ.9ರಂದು ಬೆಳಗ್ಗೆ 11.00 ಗಂಟೆಗೆ ಕೂಳೂರಿನ ವ್ಯವಸಾಯ ಸೇವಾ ಸಹಕಾರಿ ಸಭಾಂಗಣದಲ್ಲಿ ಜರಗಲಿದೆ ಎಂದು ಕನ್ನಡ ಸೇನೆ ದ.ಕ ಜಿಲ್ಲಾ ಕಾರ್ಯಾಧ್ಯಕ್ಷ ಗುರುಚಂದ್ರ ಹೆಗ್ಡೆ ಗಂಗಾರಿ ಕೂಳೂರು ತಿಳಿಸಿದ್ದಾರೆ.
ಉದ್ಘಾಟನೆಯನ್ನು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ಮಾಡಲಿದ್ದಾರೆ. ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ದ.ಕ.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮತ್ತು ದ.ಕ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಹಾಗೂ ವಿಜಯ ಟೈಮ್ಸ್ ಪತ್ರಿಕೆಯ ಸಂಪಾದಕ ವಿಜಯಲಕ್ಷ್ಮೀ ಶಿಬರೂರು ಅವರು ಭಾಗವಹಿಸಲಿದ್ದಾರೆ.
ಕನ್ನಡ ನಾಡಿನ ಸಮಗ್ರ ಅಭಿವೃದ್ಧಿಯನ್ನು ಬಯಸುವ ಮತ್ತು ಹಿತ ಕಾಯುವ ಮಹತ್ತರ ಉದ್ದೇಶವಿಟ್ಟುಕೊಂಡು ಸ್ಮಾಪನೆಯಾದ ಕನ್ನಡ ಸೇನೆ ಕರ್ನಾಟಕಕ್ಕೆ 35 ವರ್ಷಗಳು ಸಂದಿವೆ. 2013ರಲ್ಲಿ ಪುತ್ತೂರಿನಲ್ಲಿ ಕನ್ನಡ ಸೇನೆ ಅಸ್ಥಿತ್ವಕ್ಕೆ ಬಂದು ಸರಕಾರಿ ಮೆಡಿಕಲ್ ಕಾಲೇಜು ತರುವಲ್ಲಿ ನಿರ್ಣಾಯಕ ಹೋರಾಟ ಮಾಡಿದೆ. ಹಲವಾರು ಹೋರಾಟ ಮಾಡಿಕೊಂಡು ಜನತೆಗೆ ನ್ಯಾಯಯುತ ಹಕ್ಕು ಒದಗಿಸುವಲ್ಲಿ ಸಫಲವಾಗಿದೆ.
Kshetra Samachara
06/10/2021 11:51 am