ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ನವರಾತ್ರಿ ದಿನಗಳಲ್ಲಿ ದೇವರ ದರ್ಶನ ಸಮಯ ಬದಲಾವಣೆ; ಶೇಷವಸ್ತ್ರ ವಿತರಣೆ ರದ್ದು

ಮುಲ್ಕಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಸಂದರ್ಭ ಅ. 7ರಿಂದ 14ರ ವರೆಗೆ ಭಕ್ತರಿಗೆ ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ.ನವರಾತ್ರಿ ಸಂದರ್ಭ ದೇವರಿಗೆ ಎರಡು ಅಭಿಷೇಕ ಹಾಗೂ ಅಲಂಕಾರ ಇರುವುದರಿಂದ ಮಧ್ಯಾಹ್ನ 2.30ರಿಂದ ಸಂಜೆ 5ರ ವರೆಗೆ ದರ್ಶನ ಇರುವುದಿಲ್ಲ.

ಭಕ್ತರಿಗೆ ಬೆಳಿಗ್ಗೆ 7ರಿಂದ 10.30 ರ ವರೆಗೆ,ಮಧ್ಯಾಹ್ನ ಬೆಳಗ್ಗೆ 11ರಿಂದ ಮಧ್ಯಾಹ್ನ 2.30ರ ವರೆಗೆ ಹಾಗೂ ಸಂಜೆ 5 ರಿಂದ ರಾತ್ರಿ 10ರ ವರೆಗೆ ದೇವರ ದರ್ಶನ ಲಭ್ಯವಿದ್ದು, ಈ ನಿಯಮ ಅಕ್ಟೋಬರ್ 7ರಿಂದ 14ರ ವರೆಗೆ ಮಾತ್ರ. 15 ರಿಂದ ಮಧ್ಯಾಹ್ನ ದೇವರ ದರ್ಶನ ನಿರಂತರ ಇರುತ್ತದೆ. ಕೊರೊನಾ ನಿಯಮಾವಳಿ ಪಾಲನೆ ಹಿನ್ನೆಲೆಯಲ್ಲಿ ನವರಾತ್ರಿ ಸಂದರ್ಭ ಅ. 10ರ ಲಲಿತಾ ಪಂಚಮಿಯಂದು ಶ್ರೀ ದೇವರ ಶೇಷ ವಸ್ತ್ರ ವಿತರಣೆ ಇರುವುದಿಲ್ಲವೆಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

Edited By : PublicNext Desk
Kshetra Samachara

Kshetra Samachara

06/10/2021 11:10 am

Cinque Terre

1.05 K

Cinque Terre

0