ಮುಲ್ಕಿ: ಕಿನ್ನಿಗೋಳಿಯ ರೋಟರಿ ವತಿಯಿಂದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಏಳಿಂಜೆಯ ಹಿರಿಯ ನಾಗರಿಕ ಯೋಗೀಶ್ ರಾವ್ ರವರನ್ನು ಪತ್ನಿ ವತ್ಸಲಾ ರಾವ್ ರವರನ್ನು ಗೌರವಿಸಲಾಯಿತು. ಈ ಸಂದರ್ಭ ಕಿನ್ನಿಗೋಳಿ ರೋಟರಿ ಅಧ್ಯಕ್ಷ ಸ್ವರಾಜ್ ಶೆಟ್ಟಿ ಮಾತನಾಡಿ ಹಿರಿಯ ನಾಗರಿಕರು ರಾಷ್ಟ್ರದ ಆಸ್ತಿಯಾಗಿದ್ದು ಅವರ ಹೋರಾಟದಿಂದಲೇ ದೇಶ ಅಭಿವೃದ್ಧಿಯಾಗಿದೆ ಎಂದರು.
ಕಿನ್ನಿಗೋಳಿ ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ಸೆವ್ರಿನ ಲೋಬೋ,ತೆರೆಜಾ,ಶಾಲಿನಿ,ಸಾಯಿನಾಥ್,ಶರತ್,ದೇವಿಪ್ರಸಾದ್,ಹರೀಶ್, ಕೆ.ಬಿ.ಸುರೇಶ್ ಇದ್ದರು.
Kshetra Samachara
01/10/2021 08:48 pm