ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಕೃಷ್ಣಮಠದ ರಾಜಾಂಗಣದಲ್ಲಿ ಬುಡಕಟ್ಟು ಜನರ ಕಲರವ!

ಉಡುಪಿ: ಬಡವರ ಸೇವೆ ಮಾಡುವುದೇ ನಿಜವಾದ ಪೂಜೆ ಎಂಬ ಮಾತಿದೆ.ಕೃಷ್ಣಮಠದ ಪರ್ಯಾಯ ಅದಮಾರು ಮಠಾಧೀಶರು, ಬುಡಕಟ್ಟು ಜನಾಂಗ ವೊಂದರ ಅಪರೂಪದ ಪ್ರತಿಭೆಗೆ ಅವಕಾಶ ಕೊಟ್ಟು ದೇವರ ಜೊತೆಗೆ ಬಡವರ ಸೇವೆಯನ್ನು ಮಾಡಿದ್ದಾರೆ.ಹೇಗೆ ಅಂತೀರಾ?

ಈ ಮುಂಡಾಕದ ಎಲೆಯಿಂದ ನಾನಾ ಬಗೆಯ ಪ್ರಯೋಜನಗಳಿವೆ. ಈ ಎಲೆಯನ್ನು ಬಳಸಿಕೊಂಡು, ಗೊಡ್ಡ ಮೊಗೇರ ಎಂಬ ಬುಡಕಟ್ಟು ಸಮುದಾಯದ ಜನ ಅನೇಕ ಉತ್ಪನ್ನಗಳನ್ನು ತಯಾರಿಸುತ್ತಾರೆ. ಎಲ್ಲಕ್ಕಿಂತಲೂ ಅವರು ಈ ಎಲೆಯಿಂದ ತಯಾರಿಸುವ ಚಾಪೆ, ಅದ್ಭುತವಾಗಿದೆ. ಕಲಾತ್ಮಕವಾಗಿ ಎಲೆಯನ್ನು ಜೋಡಿಸಿ ಚಾಪೆ ತಯಾರಿಸುವ ಕೈಚಳಕ, ಈ ಜನಾಂಗದವರಿಗೆ ಮಾತ್ರ ಗೊತ್ತು. ಈ ಜನಾಂಗದ ಜನರನ್ನು ಉಡುಪಿಯ ಕೃಷ್ಣಮಠಕ್ಕೆ ಬರಮಾಡಿಕೊಳ್ಳಲಾಗಿತ್ತು. ಮಠದ ಆವರಣದಲ್ಲಿ ಎಲೆಗಳನ್ನೆಲ್ಲ ಜೋಡಿಸಿ ಬಗೆಬಗೆ ಚಾಪೆಯನ್ನು ತಯಾರಿಸಲು ಅವಕಾಶ ನೀಡಲಾಗಿತ್ತು.

ಉಡುಪಿಯ ನದಿ ಮತ್ತು ಸಮುದ್ರ ತೀರಗಳಲ್ಲಿ ವಾಸಿಸುವ ಈ ಗೊಡ್ಡ ಮೊಗೇರ ಜನಾಂಗದವರು, ಯಾವುದೇ ಆರ್ಥಿಕ ಲಾಭ ಇಲ್ಲದ ಕಾರಣಕ್ಕೆ ಈ ಚಾಪೆ ನೇಯುವ ಕೆಲಸವನ್ನು ಬಹುತೇಕ ಕೈ ಬಿಟ್ಟಿದ್ದಾರೆ. ಇವರ ಕಲೆಗೆ ಆಧುನಿಕ ಸ್ಪರ್ಶವನ್ನು ನೀಡಿ, ಆನ್ಲೈನ್ ಮಾರುಕಟ್ಟೆಯ ಮೂಲಕ ಹೊಸ ಗ್ರಾಹಕರನ್ನು ಸೆಳೆಯಲು ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈಗಾಗಲೇ ಉಡುಪಿ ಸೀರೆ, ಕೊರಗ ಜನಾಂಗದ ಡೋಲು, ಇಂತಹ ಅಪರೂಪದ ಬುಡಕಟ್ಟು ರಚನೆಗಳಿಗೆ ಅದಮಾರು ಮಠದವರು ವೇದಿಕೆ ನೀಡಿದ್ದಾರೆ. ಗುಡ್ಡಗಾಡುಗಳಲ್ಲಿ ಅಲೆದಾಡಿ ಈ ಜನಾಂಗದ ಮಹಿಳೆಯರು ಮುಂಡಾಕದ ಎಲೆಗಳನ್ನು ಸಂಗ್ರಹಿಸಿ, ಹರಸಾಹಸಪಟ್ಟು ಚಾಪೆ ತಯಾರಿಸುತ್ತಾರೆ. ವಿಶೇಷವಾಗಿ ದೇವಸ್ಥಾನದ ಸಂತರ್ಪಣೆಯ ಸಂದರ್ಭದಲ್ಲಿ, ಅನ್ನವನ್ನು ರಾಶಿ ಹಾಕಲು ಇದೇ ಜಾಪೆ ಬಳಸಲಾಗುತ್ತದೆ. ಆರಾಧನೆಗೆ ಬಳಸುವ ಈ ಚಾಪೆಯನ್ನು ಪಲ್ಲ ಚಾಪೆ ಎಂದು ಕರೆಯುತ್ತಾರೆ. ಅದೇ ರೀತಿಯಲ್ಲಿ ಮಲಗುವ ಚಾಪೆ, ಪೂಜೆಯ ಚಾಪೆ, ತೊಟ್ಟಿಲು ಚಾಪೆ, ಜಾಪೆಯ ಕೈಚೀಲವನ್ನು ಕಲಾಕೃತಿಯ ರೀತಿಯಲ್ಲಿ ಈ ಮಹಿಳೆಯರು ತಯಾರಿಸುತ್ತಾರೆ.

ಒಟ್ಟಾರೆ ಈ ಜನಾಂಗದ ಪ್ರತಿಭೆಯನ್ನು ಗುರುತಿಸಿ,ಅವರಿಗೂಂದು ಅವಕಾಶವನ್ನು ಮಠದ ಅಂಗಳದಲ್ಲಿ ಕಲ್ಪಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು.

Edited By : Nagesh Gaonkar
Kshetra Samachara

Kshetra Samachara

01/10/2021 07:31 pm

Cinque Terre

12.03 K

Cinque Terre

0

ಸಂಬಂಧಿತ ಸುದ್ದಿ