ಮಣಿಪಾಲ: ಮಣಿಪಾಲ ಮಹಿಳಾ ಸಮಾಜವು ಉಡುಪಿ ಜಿಲ್ಲೆಯ ಮಕ್ಕಳಿಗಾಗಿ "ಉಡುಪಿ ಶೈನಿಂಗ್ ಸ್ಟಾರ್ " ಎಂಬ ಆನ್ ಲೈನ್ ಸಂಗೀತ ಸ್ಪರ್ಧೆಯನ್ನು ಆಯೋಜಿಸಿದ್ದು ಇದರ ಗ್ರಾಂಡ್ ಫಿನಾಲೆ ಕಾರ್ಯಕ್ರಮ ಅಕ್ಟೋಬರ್ ೩ರಂದು ನಡೆಯಲಿದೆ ಎಂದು ಮಣಿಪಾಲ ಮಹಿಳಾ ಸಮಾಜದ ಅದ್ಯಕ್ಷೆ ಸರಿತಾ ಸಂತೊಷ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು , ಕೊರೋನಾ ಎಂಬ ಮಹಾಮಾರಿಯು ಪ್ರಪಂಚಾದಾದ್ಯಂತ ಹರಡಿ ಎಲ್ಲರೂ ಮನೆಯಲ್ಲೇ ಇರಬೇಕಾದ ಪರಿಸ್ಥಿತಿ ಬಂದಾಗ ಮಣಿಪಾಲ ಮಹಿಳಾ ಸಮಾಜದ ಕೆಲವು ಸದಸ್ಯೆಯರ ಕಲ್ಪನೆಯಲ್ಲಿ ರೂಪುಗೊಂಡ ಸ್ಪರ್ಧೆ ಇದು.
ಈ ಸ್ಪರ್ಧೆಗಾಗಿ ನೋಂದಣಿ ಶುರುವಾದಾಗ ಸುಮಾರು 100 ಮಕ್ಕಳು ಭಾಗವಹಿಸಬಹುದೆಂದು ಅಂದಾಜು ಇತ್ತು. ಆದರೆ ಕೊನೆಗೆ 311 ಮಕ್ಕಳು ಸ್ಪರ್ಧೆಗೆ ತಮ್ಮ ಹೆಸರನ್ನು ನೋಂದಾಯಿಸಿದ್ದರು.
311 ಸ್ಪರ್ದಾಳುಗಳಲ್ಲಿ 186 ಮಕ್ಕಳು ಪ್ರಥಮ ಸುತ್ತಿಗಾಗಿ ಆಯ್ಕೆ ಆದರು.ಎರಡನೇ ಸುತ್ತಿಗಾಗಿ 186 ಮಕ್ಕಳಲ್ಲಿ ಒಟ್ಟು 76 ಸ್ಪರ್ಧಾಳುಗಳು ಆಯ್ಕೆ ಆದರು. ಮೂರನೇ ಸುತ್ತಿಗಾಗಿ 76 ಸ್ಪರ್ಧಿಗಳಲ್ಲಿ 36 ಸ್ಪರ್ಧಾಳುಗಳು ಆಯ್ಕೆ ಆದರು. ಇದರ ಗ್ರಾಂಡ್ ಫಿನಾಲೆ ಕಾರ್ಯಕ್ರಮ ಅಕ್ಟೋಬರ್ ೩ರಂದು ನಡೆಯಲಿದ್ದು ಇದಕ್ಕಾಗಿ ಅಕ್ಟೋಬರ್ 2ರಂದು ಗ್ರಾಂಡ್ ಫಿನಾಲೆ ಯ ರಿಹರ್ಸಲ್ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಕೃಪಾ ಪ್ರಸೀದ್, ಮೀತ ರವಿ ಪೈ, ಪದ್ಮಾ ಕಿಣಿ, ದೀಪ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು.
Kshetra Samachara
30/09/2021 03:14 pm